ಪರಿವಾರ ಮತ್ತು ತಳವಾರ ಜಾತಿಗಳಿದ್ದು ಆ ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಣಮಾಣ ಪತ್ರಗಳನ್ನು ನೀಡಲು ಬರುವುದಿಲ್ಲಾವೆಂದು ವಾಲ್ಮೀಕಿ ನಾಯಕ ಸ್ವಾಭಿಮಾನಿ ಚಳುವಳಿ ಹೇಳಿದರು.
ಈ ರಾಜ್ಯದ ಮುಖ್ಯಮಂತ್ರಿಯವರು ಕೋಲಿ ಸಮುದಾಯದ ಮತಗಳನ್ನು ಪಡೆಯಲು ಪರಿಶಿಷ್ಟ ಪಂಗಡದ ಜಾತಿಪ್ರಮಾಣ ಪತ್ರ ನೀಡುತ್ತೇವೆ ಎಂದು ಆಶ್ವಾಸನೆ ನೀಡಿ ಅದರಂತೆ ಜಾತಿ ಪ್ರಮಾಣ ಪತ್ರಗಳನ್ನು ನೀಡುವಂತೆ ಆದೇಶ ಮಾಡಿರುವುದು. ಸಂವಿಧಾನದ ಸ್ಪಷ್ಟ ಉಲ್ಲಂಘನೆ ಮಾಡಿದ್ದಾರೆ.
ಇದೆ ರಾಜಕೀಯ ಓಲೇಸಿಕೂಳ್ಳುವ ಗೋಸ್ಕರ ಸಂಸದರಾದ ಉಮೇಶ ಜಾದವ ಮಾಜಿ ಸಚಿವ ಬಾಬುರಾವ್ ಚಿಚನಸೂರು ಶಾಸಕರಾದ ಎನ್ ,ರವಿಕುಮಾರ ರವಿ ಭೂಸನೂರು ಎನ್ನುವರು ಅಂಭಿಗ ಜಾತಿಯವರಿಗೆ ತಳವಾರ ಮತ್ತು ಪರಿವಾರ ಜಾತಿಗಳಿಗೆ ಪರಿಶಿಷ್ಟ ಪಂಗಡದ ಪ್ರಮಾಣಪತ್ರ ಪಡೆಯಲು ಅರ್ಹರು ಎಂದು ಸಿಹಿ ಹಂಚಿ ಸಂಭ್ರಮಿಸುತ್ತಿರುವುದು ನೋಡಿದರೆ ಇವರಿಗೆ ಮಾಹಿತಿಯ ಕೊರತೆ ಇದೆ ಮತ್ತು ಸಮುದಾಯಗಳ ನಡುವೆ ಗೊಂದಲ ಸೃಷ್ಟಿಸುತ್ತಿದ್ದಾರೆ.
ಸರ್ಕಾರದ ಆದೇಶಗಳನ್ನು ಮೊದಲು ಓದಿ ತಿಳಿದುಕೊಳ್ಳಲಿ ಸರ್ಕಾರದ ಆದೇಶದಲ್ಲಿ ಸ್ಪಷ್ಟತೆ ಇದ್ದರು . ಜಾತಿ ಜಾತಿಗಳ ಮಧ್ಯೆ ಜಾತಿ ಗೊಂದಲ ಸೃಷ್ಟಿ ಮಾಡಿ ಸಂವಿಧಾನದ ಆಶಯಗಳಿಗೆ ಬೆಂಕಿ ಇಡುವ ಕೆಲಸವನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ. ಒಂದು ವೇಳೆ ಸರ್ಕಾರದ ಆದೇಶದ ವಿರುದ್ಧ ಅಂಬಿಗ ಕೂಲಿ ಸಮಾಜದ ತಳವಾರ ಮತ್ತು ಪರಿವಾರ ಸಮುದಾಯದ ಪರಿಶಿಷ್ಟ ಪಂಗಡದ ಜನಾಂಗದವರು ಎಂದು ಪ್ರಮಾಣಪತ್ರ ನೀಡಿದರೆ ಆಯಾ ಜಿಲ್ಲಾಧಿಕಾರಿ ಸಹಾಯಕ ಆಯುಕ್ತರು. ಮತ್ತು ತಹಶೀಲ್ದಾರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಆಗುತ್ತದೆ ಎಂದು ಎಚ್ಚರಿಸುತ್ತೇನೆ ಎಂದಿದರೆ.