ಮಾನ್ವಿ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆಯುತ್ತಿರುವ ಅವ್ಯವರ ಕುರಿತು ಇಂದು ರೂಪ ಶ್ರೀನಿವಾಸ್ ನಾಯಕ ಅವರ ನೇತೃತ್ವದಲ್ಲಿ, ಜಿಲ್ಲಾಧ್ಯಕ್ಷರು ರೈತರ ಸೇನೆ ರಾಯಚೂರು ಮಾನ್ವಿ ತಾಲೂಕಿನಲ್ಲಿ ಪತ್ರಿಕಾಗೋಷ್ಠಿ ಮಾಡಲಾಯಿತು.
ಯುವಕರಿಗೆ ಸಹಾಯವಾಗಲೆಂದು ಸರ್ಕಾರ ಮಾಡಿರುವ ಸೌಲಭ್ಯಗಳನ್ನು ನಿಜವಾದ ಫಲಾನುಭವಿಗಳಿಗೆ ಸಿಗದೆ ಶಾಸಕರ ಬೆಂಬಲಿಗರಿಗೆ ಸಿಗುತ್ತಿರುವುದರಿಂದ ರೊಚ್ಚಿಗೆದ್ದ ಯುವಕರು ಕರ್ನಾಟಕ ರಾಜ್ಯ ರೈತರ ಸಂಘ ಹಸಿರು ಸೇನೆಗೆ ದೂರು ನೀಡಿದ್ದು. ದಾಖಲೆ ಸಮೇತ ಪತ್ರಿಕಾಗೋಷ್ಠಿಯನ್ನು ಕೂಡ ನಡೆಸಿದರು.