ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಜನವಿರೋಧಿಯಾಗಿದೆ. ಕಾರ್ಪೋರೇಟ್ ಕಂಪನಿಗಳ ಯೋಜನೆಗಳಿಗೆ ಮಾತ್ರ ಅನುಕೂಲವಾಗುವಂತಹ ಬಜೆಟ್ ಆಗಿದ್ದು, ಇಂತಹ ಬಜೆಟ್ ಮಂಡನೆಯಿಂದ ಜನ ಸಾಮಾನ್ಯರ ಬದುಕು ದುಸ್ಥಿತಿಗೆ ತಳ್ಳುವ ಬಜೆಟ್ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಶಾಸಕ ಹಾಗೂ ಪ್ರಜಾ ಸಂಘರ್ಷ ಸಮಿತಿ ಸಂಸ್ಥಾಪಕ ಜಿ.ವಿ.ಶ್ರೀರಾಮರೆಡ್ಡಿ ವಾಗ್ದಾಳಿ ಮಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನವಿರೋಧಿ ಧೋರಣೆಯ ವಿರುದ್ಧ ಅವರು ಇಂದು ಬಾಗೇಪಲ್ಲಿ ಪಟ್ಟಣದಲ್ಲಿ ಪ್ರಜಾ ಸಂಘರ್ಷ ಸಮಿತಿಯ ಕಾರ್ಯಕರ್ತರ ವತಿಯಿಂದ ಹಮ್ಮಿಕೋಂಡಿದ್ದ ರಸ್ತೆ ತಡೆ ಚಳುವಳಿಯಲ್ಲಿ ಕಾಯ೯ಕ್ರಮದಲ್ಲಿ ಭಾಗವಹಿಸಿ ರಾಜ್ಯ ಸರ್ಕಾರಗಳು ರೈತರ,ಕೃಷಿಕೂಲಿ ಕಾಮಿ೯ಕರ,ವಿದ್ಯಾಥಿ೯ಯುವಜನರ ಅಭಿವೃದ್ಧಿಗೆ ಬಜೆಟ್ ನ್ನು ರೂಪಿಸಿಲ್ಲ ಇದು ಕೇವಲ ದೊಡ್ಡ ದೊಡ್ಡ ಖಾಸಗಿ ಕಂಪನಿಗಳಿಗೆ ವರದನವಾಗಿದೆ. ಇದರಿಂದ ಭವಿಷ್ಯದ ದಿನಗಳಲ್ಲಿ ದೇಶದಲ್ಲಿ ಬಡತನ ನಿರುದ್ಯೋಗ ಸಮಸ್ಯೆ ಮತ್ತಷ್ಟು ತೀವ್ರಗೊಂಡು ಮಾದ್ಯಮ ವರ್ಗದ ಜನ ಸಾಮಾನ್ಯರು ತತ್ತರಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಇದಕ್ಕೂ ಮುಂಚೆ ಪ್ರಜಾ ಸಂಘಷ೯ದ ಕಾರ್ಯಕರ್ತರು ಡಾ.ಎಚ್. ಎನ್.ವೃತ್ತದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ಮಾಡಿ ಸಾರಿಗೆ ಬಸ್ ನಿಲ್ದಾಣದ ಮುಂಭಾಗದಲ್ಲಿ ರಸ್ತೆ ತಡೆಮಾಡಿ ಪ್ರತಿಭಟಿಸಿದರು.