ಅಥಣಿ: ತಾಲೂಕಿನ ರಡ್ಡೇರಟ್ಟಿ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಬಸವಾಲ ನಾಯಿಕ ಉದ್ಘಾಟಿಸಿದರು.
ಕರ್ನಾಟಕ ಸರ್ಕಾರ ನೂತನ ಸೇವಾಕೇಂದ್ರವಾಗಿ ಪ್ರತಿಗ್ರಾಮದಲ್ಲಿ ಪ್ರಾರಂಭಿಸವ ಉದ್ದೇಶದಿಂದ ಸರಕಾರವು ಸುಮಾರು ಸೇವೆಗಳನ್ನು ಒಂದೇ ಸೂರಿನಡಿ ತರಲು ಉದ್ದೇಶಿಸಿ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ಗ್ರಾಮ ಲೆಕ್ಕಾಧಿಕಾರಿ ಈರಪ್ಪ ನಿಂಗಪ್ಪಗೊಳ್ ಮಾತನಾಡಿದರು.
ಪ್ರತಿಯೊಬ್ಬರೂ ಸೇವಾ ಕೇಂದ್ರದ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸೇವಾ ಕೇಂದ್ರದ ಮುಖ್ಯಸ್ಥರಾದ ಅಣ್ಣಪ್ಪ ಶಿ ಕಿತ್ತೂರ್ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಪಿ ಡಿ ಓ ಉಮೇಶ್ ಪೊಳ್ಳ್ , ಜ್ಯೋತಿಬಾ ಅಕ್ಕೋಳ್, ಗುರು ಬಸು ಖೋತ್, ಬಾಬು ಹುಲ್ಯಾಳ, ಸಹದೇವ ಅರಗೋಟ್ಟಿ, ಸಂಗಪ್ಪ ಬೆಳ್ಳಕ್ಕಿ, ರಮೇಶ್ ಕಿತ್ತೂರ್, ಶಿವಾನಂದ ಗಲಗಲಿ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು