ತುಮಕೂರು: ನಗರದ ಹೊರಪೇಟೆ ರಸ್ತೆಯಲ್ಲಿ ಜಿಲ್ಲಾ ವಾಲ್ಮೀಕಿ ನಾಯಕ ಸಮುದಾಯದಿಂದ ವಿವಿಧ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕುಪ್ಪೂರು ಶ್ರೀಧರ್ ನಾಯಕ ರವರು ಜಿಲ್ಲೆಯಲ್ಲಿ ಸುಮಾರು 2.5ಲಕ್ಷಕ್ಕೂ ಅಧಿಕ ಸಂಖ್ಯೆ ಸಮುದಾಯವಿದ್ದು, ಹಾಗೂ ರಾಜ್ಯದ ಮೂರನೇ ಅತಿದೊಡ್ಡ ಸಮುದಾಯವಾಗಿರುವ ವಾಲ್ಮೀಕಿ ಸಮುದಾಯ ಪ್ರತಿ ಚುನಾವಣೆಗಳಲ್ಲಿಯೂ ನಿರ್ಣಾಯಕ ಪಾತ್ರವಹಿಸುತ್ತದೆ. ಅಲ್ಲದೆ ತುಮಕೂರು ನಗರದಲ್ಲಿ ಸುಮಾರು 18 ಸಾವಿರಕ್ಕೂ ಹೆಚ್ಚು ನಾಯಕ ಸಮುದಾಯದವಿದ್ದೂ ನಗರದಲ್ಲಿ ಕೂಡ ನಿರ್ಣಾಯಕ ಪಾತ್ರವಹಿಸುತ್ತವೆ ಆದರೆ ನಗರದ ವಿವಿಧ ಮಂಡಳಿ ಹಾಗೂ ಸರ್ಕಾರದ ನಾಮನಿರ್ದೇಶನಗಳಲ್ಲಿ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರದ ಸರ್ಕಾರದ ನಾಮನಿರ್ದೇಶನ ಗಳಲ್ಲಿ ವಾಲ್ಮೀಕಿ ಸಮುದಾಯಕ್ಕೆ ಆದ್ಯತೆ ನೀಡಲೇಬೇಕು ಒಂದು ವೇಳೆ ಸಮುದಾಯವನ್ನು ಗಣನೆಗೆ ತೆಗೆದುಕೊಳ್ಳದೆ ಹೋದರೆ ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ ಹಾಗೂ ಈ ಸಂಬಂಧ ನಗರದ ಶಾಸಕರಾದ ಶ್ರೀಯುತ ಜ್ಯೋತಿ ಗಣೇಶ್ ರವಾರನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಮಾರಣ್ಣ ಪಾಳೇಗಾರ,ಕುಪ್ಪೂರು ಶ್ರೀಧರ್ ನಾಯಕ, ರವಿಕುಮಾರ್ ಅರಳಿಮರದ ಪಾಳ್ಯ,ಕೃಷ್ಣಪ್ಪ ದೇವಲಾಪುರ ಚಂದ್ರು ಉರುಕೆರೆ, ಮಂಜುನಾಥ ಶಾಂತಿನಗರ, ಹರೀಶ್, ವರದಿ -ಕುಪ್ಪೂರು ಶ್ರೀನಿವಾಸ ನಾಯಕ ಪ್ರಧಾನ ವರದಿಗಾರರು ವಾಲ್ಮೀಕಿ ಮಿತ್ರ ಪತ್ರಿಕೆ ಇನ್ನಿತರರು ಭಾಗವಹಿಸಿದ್ದರು.