ಬೆಂಗಳೂರು: ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ರೋಗಿಯ ಪ್ರಾಣ ಉಳಿಸಲು, ಸ್ವತಃ ತಾನೇ ಮೆಕ್ಯಾನಿಕ್ ಆಗಿ, ಪಂಕ್ಚರ್ ಆಗಿದ್ದ ಆಂಬುಲೆನ್ಸ್ ಟಯರ್ ಅನ್ನು ಬದಲಾಯಿಸಿ ಸಂಚಾರಿ ಪೊಲೀಸ್ ಒಬ್ಬರು ಮಾನವೀಯತೆ ಮೆರೆದಿದ್ದಾರೆ.
ರೋಗಿಯನ್ನ ಶಿಫ್ಟ್ ಮಾಡುವ ವೇಳೆ ಟಯರ್ ಪಂಕ್ಚರ್ ಆಗಿದ್ದು, ದಿಕ್ಕು ತೋಚದೆ ರೋಗಿಯ ಪತ್ನಿ, ಮಗಳು ಕಂಗಾಲಾಗಿದ್ದರು. ಈವೇಳೆ ರೋಗಿಯ ಸ್ಥಿತಿ ನೋಡಿದ ಸಂಚಾರಿ ಪೊಲೀಸ್ ಕಾಸಪ್ಪ ಕಲ್ಲೂರು ತಾವೇ ಟಯರ್ ಚೇಂಜ್ ಮಾಡಿದ್ದಾರೆ. ಪೊಲೀಸ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.