ಮಾನವಿ: ಜೆಡಿಎಸ್ ಕಾರ್ಯಕರ್ತರಿಂದ ಮಾನವಿಯಲ್ಲಿ ಬೃಹತ್ ಬೈಕ್ ರ್ಯಾಲಿ “ಮತ್ತೊಮ್ಮೆ ಮಾನವಿಗೆ ರಾಜಣ್ಣ, ರಾಜ್ಯಕ್ಕೆ ಕುಮಾರಣ್ಣ ಎಂಬ ಘೋಷಣೆ ಯಿಂದ “ಇಂದು ಮಾನ್ವಿ ನಗರದಲ್ಲಿ ನಡೆಸಿದರು.
ಮಾನ್ವಿ ವಿಧಾನ ಸಭಾ ಕ್ಷೇತ್ರದ ಜನತಾದಳ (ಜಾತ್ಯಾತೀತ) ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯಕ್ರಮವನ್ನು ನಿಮಿತ್ಯ ಮಾನ್ವಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಚುನಾಯಿತ ಜನಪ್ರತಿನಿಧಿಗಳು ಹಾಗೂ ಜೆಡಿಎಸ್ ಹಿರಿಯ ಮುಖಂಡರು ಹಾಗೂ ಯುವ ಮುಖಂಡರು ಅಪಾರ ಸಂಖ್ಯೆಯ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಮಾನ್ವಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ರಾಜಾ ವೆಂಕಟಪ್ಪ ನಾಯಕ ದೊರೆ ಅವರನ್ನು ಮಾನ್ವಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಬೈಕ್ ರ್ಯಾಲಿ ಮೆರವಣಿಗೆ ಮೂಲಕ ಕಾರ್ಯಕ್ರಮದ ವೇದಿಕೆಯ ವರೆಗೂ ಅದ್ದೂರಿಯಾಗಿ ಬರಮಾಡಿಕೊಂಡರು.
ನಂತರ ಈ ಕಾರ್ಯಕ್ರಮವನ್ನು ಜಂಟಿಯಾಗಿ ಉದ್ಘಾಟಿಸಿದ ,ಮಾಜಿ ಸಚಿವರು ಸಿಂಧನೂರಿನ ಜನಪ್ರಿಯ ಶಾಸಕರು ಸನ್ಮಾನ್ಯ ಶ್ರೀ ವೆಂಕಟರಾವ್ ನಾಡಗೌಡ ಹಾಗೂ ಮಾನ್ವಿ ಜನಪ್ರಿಯ ಶಾಸಕರು ಸನ್ಮಾನ್ಯ ಶ್ರೀ ರಾಜಾ ವೆಂಕಟಪ್ಪ ನಾಯಕ ದೊರೆ ಅವರು ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶ್ರೀ ಎಂ ವಿರುಪಾಕ್ಷಿ ಹಾಗೂ ದೇವದುರ್ಗದ ಜಿ ಕರಿಯಮ್ಮ ನಾಯಕ ಶ್ರೀ ಮಹಾಂತೇಶ್ ಪಾಟೀಲ್ ಅತ್ತನೂರ್ ಸ್ತ್ರೀ ಶಿವಶಂಕರ ವಕೀಲರು ಶ್ರೀ ಜಂಬುನಾಥ ಯಾದವ್ ಶ್ರೀ ಮಲ್ಲಿಕಾರ್ಜುನ್ ಪಾಟೀಲ್ ಬಲ್ಲಟಗಿ ಶ್ರೀ ರಾಜಾ ರಾಮಚಂದ್ರನಾಯಕ ದೊರೆ ಎಂ ಪವನ್ ಕುಮಾರ್ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರು ಹಾಗೂ ಜಿಲ್ಲಾ ಎಲ್ಲಾ ಪದಾಧಿಕಾರಿಗಳು ಹಾಗೂ ಮಾನ್ವಿ ಜೆಡಿಎಸ್ ಪುರಸಭೆ ಎಲ್ಲಾ ಸದಸ್ಯರು ಹಾಗೂ ಸಿರುವಾರ ಹಾಗೂ ಕವಿತಾಳ ಪಟ್ಟಣ ಪಂಚಾಯತ್ ಸದಸ್ಯರು ಮಾನ್ವಿ ಹಾಗೂ ನೂತನ ಸಿರುವಾರ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರು ಜೆಡಿಎಸ್ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ,ಜೆಡಿಎಸ್ ಹಿರಿಯ ಮುಖಂಡರು ಹಾಗೂ ಯುವ ಮುಖಂಡರು ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.