ಮತಂತರ ಆಗುತ್ತಿರುವುದನ್ನು ತಡೆಯಲು ಸಚಿವ ಶ್ರೀರಾಮುಲು ಸ್ವಾಮೀಜಿಗಳೊಂದಿಗೆ ಸಭೆ

ಹುಬ್ಬಳ್ಳಿ:ಧಾರ್ಮಿಕ ಕ್ಷೇತ್ರಗಳಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಜನಾಂಗದವರು ಕ್ರಿಶ್ಚಿಯನ್‌ ಮಿಸಿನರಿಗೆ ಸುಮಾರು 40.000 ಜನ ಕನ್ವರ್ಟ್ ಆಗಿದ್ದು ಕಂಡು ಬಂದಿದ್ದರಿಂದ ಧರ್ಮ ಗುರುಗಳು ಹಾಗೂ 31 ಜಿಲ್ಲೆಯಲ್ಲಿರುವ ಮುಖ್ಯ ಮುಖಂಡರು,ಸಾಹಿತಿಗಳು,ಸಂಶೋದಕರು,ನಿವೃತ್ತ ವಿವಿಧ ಇಲಾಖೆಯ ಅಧಿಕಾರಿಗಳಿಗೆ ರಾಜ್ಯ ವಾಲ್ಮೀಕಿ ಸಂಘಟನೆಯಲ್ಲಿರುವವರು, ಬುದ್ದಿ ಜೀವಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಚಿಂತನೆ ,ಎಲ್ಲಾ ಅಭಿಪ್ರಾಯವನ್ನು ಪಡೆದು ನಂತರ ಅಜಾಂಡಾ ತಯಾರಿಸಿ ಸಚಿವ ಶ್ರೀ ರಾಮುಲು ಇವರಿಗೆ ಸಲ್ಲಿಸಲಾಯಿತು.

ವಾಲ್ಮೀಕಿ ಸ್ವಾಮಿಗಳು ಸಚಿವ ಶ್ರೀ ರಾಮುಲು ರವರ ಅಧ್ಯಕ್ಷತೆಯಲ್ಲಿ ಎಡದಿಂದ ಶ್ರೀ ಈಶ್ವರಾನಂದ ಸ್ವಾಮಿಜಿ. ಕೆ. ಆರ್ ಪುರಂ ಬೆಂಗಳೂರು, ಶ್ರೀ ಮಲ್ಲಿಕಾರ್ಜುನ ಸ್ವಾಮಿ ಶಿವಮೊಗ್ಗ, ಶ್ರೀ ಶಿವಾನಂದ ಸ್ವಾಮಿ ಬೈಲವಂಗಲ,ಶ್ರೀ ಬ್ರಹ್ಮಾನಂದ ಸ್ವಾಮಿ ದೊಡ್ಡ ಬಳ್ಳಾಪುರ,ಶ್ರೀ ಆತ್ಮಾನಂದ ಸ್ವಾಮಿ ಮಸ್ಕಿ,ಶ್ರೀ ಕಾಯಕಯೋಗಿ ಮಂಜಪ್ಪ ದಾವಣಗೆರೆ,ಶ್ರೀ ಪವನ ಕುಮಾರ್ಸ್ವಸಾಮಿ ಹಿರೆಮಣ್ಣಾಪುರ ಕುಷ್ಟಗಿ,ಶ್ರೀ ಶರಣಮ್ಮ ಇಲಕಲ್ಲ ಬಾಗಲಕೋಟೆ,ಶ್ರೀ ಪ್ರಕಾಶ ಸ್ವಾಮಿ ರಾಣಿಬೆನ್ನೂರು ಇವರು ಬಾಗವಹಿಸಿದ್ದರು.

ತಾಲ್ಲೂಕು,ಜಿಲ್ಲಾವಾರು ಆಯಾ ಭಾಗದಲ್ಲಿ ವಾಸವಿರುವ ಮುಖಂಡರಿಗೆ ಪ್ರತ್ಯೇಕವಾಗಿ ಕಮಿಟಿ ರಚಿಸಿ ಮತಾಂತರವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಮುಂಬರುವ ದಿನಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯವನ್ನು ನಿರ್ವಹಿಸಲು ಕಾರ್ಯ ರೂಪಿಸಲಾಯಿತು. ಇಂತಹ ಅಘಾತ ಕಾರಿ ಬೆಳವಣಿಗೆಯನ್ನು ತಡೆಗಟ್ಟಲು ವಾಲ್ಮೀಕಿಯ ಸ್ವಾಮಿಗಳಿಗೆ ಆಹ್ವಾನ ನೀಡಿ ವಿಶೇಷವಾಗಿ ವಾಲ್ಮೀಕಿ ಸ್ವಾಮಿಗಳನ್ನು ಗುರುತಿಸಿ ವೇದಿಕೆ ಒದಗಿಸಿಕೊಟ್ಟಿದ್ದಕ್ಕೆ ಎಲ್ಲಾ ಸ್ವಾಮಿಗಳ ಪರವಾಗಿ ಅಭಿನಂದನೆಗಳನ್ನು ಅರ್ಪಿಸಲಾಯಿತ್ತು.

Discover more from Valmiki Mithra

Subscribe now to keep reading and get access to the full archive.

Continue reading