ರಾಯಚೂರು: ಜಿಲ್ಲೆಯಲ್ಲಿ ಮಲ್ಲಿಕಾರ್ಜುನ ಗೌಡ ಎಂಬ ನ್ಯಾಯಾಧೀಶ ಡಾ.ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವನ್ನು ಖಂಡಿಸಿ ರಾಮದುರ್ಗದಲ್ಲಿ ನೂರಾರು ಯುವಕರು, ಪ್ರಗತಿಪರರು, ಹಾಗೂ ಹಿರಿಯ ಹೋರಾಟಗಾರರು ಸೇರಿಕೊಂಡು ಮೆರವಣಿಗೆ ಮಾಡುವ ಮೂಲಕ ಆತ ಮಾಡಿದ ನೀಚ ಕೃತ್ಯಕ್ಕೆ ಅವನಿಗೆ ತಕ್ಕ ಶಿಕ್ಷೆ ಆಗಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿ ತಶಿಲ್ದಾರ್ ಅವರಿಗೆ ಮನವಿ ಮಾಡಿಕೊಳ್ಳಲಾಯಿತು.