ಯಾದಗಿರಿ : ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಆದೇಶಗಳ ವಿರುದ್ಧವಾಗಿ ಕಲಬುರಗಿ ವಿಭಾಗದಲ್ಲಿ ಕೂಲಿ ಸಮಾಜದ ತಳವಾರ ಮತ್ತು ಪರಿವಾರ ಸಮುದಾಯಗಳಿಗೆ ಎಸ್ ಟಿ ಸಮುದಾಯದ ಜಾತಿ ಪ್ರಮಾಣ ಪತ್ರಗಳನ್ನು ನೀಡಲು ಸೂಚಿಸಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಡೆಯಿತು ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಮಾರಪ್ಪ ನಾಯಕ ಮೊಗ್ದಂಪೊರ ತೀವ್ರವಾಗಿ ಖಂಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಒಪ್ಪಿಗೆಯೊಂದಿಗೆ ದಿನಾಂಕ 19- 3- 2020 ರಂದು ಕೇಂದ್ರ ಸರ್ಕಾರ ಗೆಜೆಟಿಯರನಲ್ಲಿ ಪ್ರಕಟಿಸಿದಂತೆ, ನಾಯಕಡ ಮತ್ತು ನಾಯಕ ಜನಾಂಗದ ಉಪಜಾತಿಗಳದ ತಳವಾರ ಮತ್ತು ಪರಿವಾರ ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ನೀಡಿ ಅಧಿಸೂಚನೆ ಹೊರಡಿಸಿತ್ತು, ಅದರಂತೆ ರಾಜ್ಯ ಸರ್ಕಾರವೂ ಸಹ ದಿನಾಂಕ 31- 8- 2020ರಂದು ಸಮಾಜ ಕಲ್ಯಾಣ ಇಲಾಖೆಯು ಸರ್ಕಾರದಿಂದ ಕಾಲಕಾಲಕ್ಕೆ ಹೊರಡಿಸಿರುವ ಆದೇಶಗಳ ಜೊತೆಗೆ ಹಿಂದುಳಿದ ಜಾತಿಗಳಲ್ಲಿಯೂ ಪರಿವಾರ ಮತ್ತು ತಳವಾರ ಜಾತಿಗಳಿದ್ದು ಆ ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರಗಳನ್ನು ನೀಡಲು ಬರುವುದಿಲ್ಲವೆಂದು ಹೇಳಲಾಗಿತ್ತು.
ರಾಜ್ಯ ಮುಖ್ಯಮಂತ್ರಿಯವರು, ಸಿಂದಗಿ,ಬಸವಕಲ್ಯಾಣ,ಮಸ್ಕಿ,ಮತ್ತು ಹಾನಗಲ್ ವಿಧಾನಸಭಾ ಬೈ ಎಲೆಕ್ಷನ್‌ನಲ್ಲಿ ಕೊಲಿ ಸಮುದಾಯದ ಮತಗಳನ್ನು ಪಡೆಯಲು ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುತ್ತೆವೆಂದು ಆಶ್ವಾಸನೆ ನೀಡಿ ಅದರಂತೆ ಜಾತಿ ಪ್ರಮಾಣ ಪತ್ರಗಳನ್ನು ನೀಡುವಂತೆ ಆದೇಶ ಮಾಡಿರುವದು ಸಂವಿಧಾನ ವಿರೋಧಿಯಾಗಿದೆ. ರಾಜಕೀಯ ಓಲೈಕೆಗೊಸ್ಕರ್ ಸಂಸದ ಡಾ.ಉಮೇಶ ಜಾದವ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ,ಶಾಸಕರಾದ ಎನ್ ರವಿಕುಮಾರ,ರವಿ ಭೂಸನೂರ,ಎನ್ನುವರು,ಅಂಬಿಗ ಜಾತಿಯವರಿಗೆ ತಳವಾರ ಮತ್ತು ಪರಿವಾರ ಜಾತಿಗಳಿಗೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಪಡೆಯಲು ಅರ್ಹರು ಎನ್ನುವದು ಮೂರ್ಖತನ ಎಂದು ಆರೋಪಿಸಿದರು.
ವಾಲ್ಮೀಕಿ ಆಶ್ರಮದ ಗೊಲ್ಲಪಲ್ಲಿ ಮಠದ ವಾಲ್ಮೀಕಿ ವರದಾನೇಶ್ವರ ಸ್ವಾಮಿಜಿ ಮಾತನಾಡಿ,ಕಲಬುರಗಿ ಸಂಸದ ಡಾ,ಉಮೇಶ ಜಾದವ ,ಮತ್ತು ಬಾಬುರಾವ ಚಿಂಚನಸೂರ ಸರ್ಕಾರದ ಆದೇಶಗಳನ್ನು ಮೊದಲು ಓದಿ ತಿಳಿದುಕೊಳ್ಳಲಿ,ಸರ್ಕಾರದ ಆದೇಶದಲ್ಲಿ ಸ್ಪಷ್ಟತೆ ಇದ್ದರು ಜಾತಿ ಜಾತಿಗಳ ಮದ್ಯೆ ಗೊಂದಲ ಸೃಷ್ಟಿ ಮಾಡಿ ಸಂವಿಧಾನದ ಆಶಯಗಳಿಗೆ ಬೆಂಕಿ ಇಡುವ ಕೆಲಸವನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ವೋಟ್ ಬ್ಯಾಂಕಿಗೊಸ್ಕರ್ ಗೊಂದಲ ಸೃಷ್ಟಿಮಾಡಿ ನಮ್ಮ ಸಮುದಾಯದವರನ್ನು ಓಲೈಸಿಕೊಂಡು ವಾಲ್ಮೀಕಿ ಸಮಾಜವನ್ನು ತುಳಿಯಲು ನೋಡುತ್ತಿದ್ದೀರಿ,ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.
ಮುಖಂಡ ಶ್ರವಣಕುಮಾರ ನಾಯಕ ಮಾತನಾಡಿ, ಸುಪ್ರಿಂ ಕೋರ್ಟನಲ್ಲಿ ೨೦೧೫ರಲ್ಲಿ ಜಿಲ್ಲಾಧಿಕಾರಿಗಳು ಸತರ ಮಹಾರಾಷ್ಟç ಜಿಲ್ಲೆ ಎದರು ಮಂಗೇಶ ನಿರವತಿ ಅವರ ಪ್ರಕರಣದಲ್ಲಿ ೨೦೧೯ರ ಅ.೦೧ ರಂದು ಸುಪ್ರಿಂ ಕೋರ್ಟ ನೀಡಿರುವ ತೀರ್ಪಿನಲ್ಲಿ ರಾಜ್ಯ ಸರ್ಕಾರಗಳಿಗೆ ಜಾತಿ ಮತ್ತು ಸಿಂದುತ್ವ ಪ್ರಮಾಣ ಪತ್ರಗಳ ವಿಷಯದಲ್ಲಿ ಹೊರಡಿಸಿರುವಂತ ಯಾವುದೇ ಆದೇಶದ ಅಧಿಕಾರವು ಇರುವದಿಲ್ಲಾ, ಜಾತಿ ತಿದ್ದುವದು ಮತ್ತು ಸೇರಿಸುವ ಅಧಿಕಾರವಿರುವದಿಲ್ಲಾ ಹಾಗೂ ಜಾತಿ ಪ್ರಮಾಣ ಪತ್ರ ಅಥವಾ ಸಿಂಧುತ್ವ ಪ್ರಮಾಣ ಪತ್ರಗಳು ನೀಡುವ ಜಾತಿ ಪರಿಶಿಲನೆ ಸಮಿತಿಗಳು ಜಿಲ್ಲಾ ಜಾಗೃತ ಕೋಶದಿಂದ ಕಡ್ಡಾಯವಾಗಿ ವರದಿ ಪಡೆಯಬೇಕೆಂದು ಆದೇಶ ಮಾಡಿರುವದನ್ನು ಸಂಬಂದ ಪಟ್ಟ ಸಚಿವರು ಅಧಿಕಾರಿಗಳು ತಿಳಿದುಕೊಳ್ಳಬೇಕೆಂದು ಒತ್ತಾಯಿಸಿದರು.
ಒಂದು ವೇಳೆ ಸರ್ಕಾರದ ಆದೇಶ ವಿರುದ್ದ ಅಂಬಿಗ, ಕೊಲಿ ಸಮಾಜದ ತಲವಾರ ಮತ್ತು ಪರಿವಾರ ಸಮುದಾಯದ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಪ್ರಮಾಣ ಪತ್ರ ನೀಡಿದರೆ ಆಯಾ ಜಿಲ್ಲಾಧಿಕಾರಿ ಸಹಾಯಕ ಆಯುಕ್ತರು ಮತ್ತು ತಹಸಿಲ್ದಾರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗುತ್ತೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ, ಗೌಡಪ್ಪಗೌಡ ಅಲ್ದಾಳ,ರಾಮುನಾಯಕ ಅರಳಹಳ್ಳಿ, ಮರೆಪ್ಪ ಪ್ಯಾಟಿ,ನಿವೃತ ತಹಸಿಲ್ದಾರ ಶಿವಲಿಂಗಪ್ಪ ನಾಯಕ,ಶರಣಪ್ಪ ಜಾಕನಳ್ಳಿ,ಸಿದ್ದುನಾಯಕ ಹತ್ತಿಕುಣಿ, ದೊಡಯ್ಯ ನಾಯಕ, ಮಲ್ಲಿಕಾರ್ಜುನ ಹೆಡಗಿಮದ್ರಾ, ಸಾಹೇಬಗೌಡ ಗೌಡಿಗೇರಾ ಸೇರಿದಂತೆ ಇನ್ನಿತರರು ಸೇರಿದ್ದರು.