ಯಾವುದೇ ಹೊಸ ರೀತಿಯ ಅಭಿವೃದ್ದಿ ಕಾರ್ಯಕ್ರಮವಿಲ್ಲ -ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು; ಬಜೆಟ್ ಬಗ್ಗೆ ದೊಡ್ಡಮಟ್ಟಿಗೆ ಹೇಳುವಂತಹದ್ದು ಏನೂ ಇಲ್ಲ. ಕೆಲವೊಮ್ಮೆ ಹಸಿದವರಿಗೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಿ ಎಂದು ಹೇಳುತ್ತಾರೆ. ಅದೇ ರೀತಿ ತಣ್ಣೀರು ಬಟ್ಟೆ ಹಾಕಿಕೋ ಎಂದು ಹೇಳಿದ್ದಾರೆ ಹಣಕಾಸು ಸಚಿವರು ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಸೋಂಕಿನ ಮಾರಿಗೆ ಸಿಲುಕಿ ಭರವಸೆ ಕಳೆದುಕೊಂಡಿರುವ ರೈತಾಪಿ, ಕಾರ್ಮಿಕರಿಗೆ ಧೈರ್ಯ ತುಂಬುವ ಅಥವಾ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಅಂಶಗಳು ಈ ಬಜೆಟ್ ನಲ್ಲಿ ಇರಲೇಬೇಕಾಗಿತ್ತು ಎಂದು ಹೇಳಿದರು.

ಬಜೆಟ್ ಬಗ್ಗೆ ಇನ್ನೂ ಸಂಪೂರ್ಣವಾಗಿ ಗಮನಿಸಿಲ್ಲ. ನದಿ ಯೋಜನೆ ಬಗ್ಗೆ ಮೂರು ವರ್ಷದಿಂದ ಹೇಳುತ್ತಿದ್ದಾರೆ.  ಕಾವೇರಿ – ಪೆನ್ನಾರ್, ಕೃಷ್ಣ-ಗೋದಾವರಿ ನದಿಗಳ ಜೋಡಣೆ ಬಗ್ಗೆ ಹೇಳಿದ್ದಾರೆ. ಅದು ಕಾರ್ಯರೂಪಕ್ಕೆ ಬರಬೇಕಲ್ಲ. ನದಿ ಜೋಡಣೆ ವಿಚಾರ ಬರಿ ಚರ್ಚೆಯಲ್ಲಿ. ಇದೆ ಕಾರ್ಯರೂಪಕ್ಕೆ ಬರಬೇಕಿದೆ. ಹೆಚ್ಚಿನ ತೆರಿಗೆ ವಿಧಿಸಿಲ್ಲ ಅನ್ನುವುದು ಬಿಟ್ಟರೇ ಬೇರೆ ಏನೂ ಇಲ್ಲ. ಯಾವುದೇ ಹೊಸ ರೀತಿಯ ಅಭಿವೃದ್ದಿ ಕಾರ್ಯಕ್ರಮವಿಲ್ಲ. ಈ ವರ್ಷವನ್ನು ಕಳೆಯುವ ಬಜೆಟ್ ಅಷ್ಟೇ ಇದು ಎಂದು ಅವರು ಟೀಕಿಸಿದರು.

Discover more from Valmiki Mithra

Subscribe now to keep reading and get access to the full archive.

Continue reading