ತುಮಕೂರು: ಇಂದು ತುಮಕೂರು ಜಿಲ್ಲೆಯ ವಿಧಾನಪರಿಷತ್ ಸದಸ್ಯರಾದ ಶ್ರೀ ಆರ್ ರಾಜೇಂದ್ರರವರು ತಿಪಟೂರು ತಾಲ್ಲೂಕಿನ ಶ್ರೀ ಕಾಡು ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಡಾ.ಶ್ರೀ ಮ.ನಿ.ಪ್ರ ಕರಿ ವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಠದ ಕ್ಯಾಲೆಂಡರ್ ಅನ್ನು ಆರ್. ರಾಜೇಂದ್ರರವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು, ಮುಖಂಡರಾದ ನಿಖಿಲ್ ರಾಜಣ್ಣ, ಯುವಕಾಂಗ್ರೆಸ್ ಅಧ್ಯಕ್ಷ ಇಮ್ರಾನ್, ಹಾಗು ಕೆ.ಪಿ.ಸಿ.ಸಿ ಸದಸ್ಯ ಯೋಗೇಶ್ ಹಾಜರಿದ್ದರು.