ಅಮೃತ ಗ್ರಾಮೀಣ ವಸತಿ ಯೋಜನೆ ಕಾರ್ಯಕ್ರಮ ಉದ್ಘಾಟನೆ ಮಾಡಿದ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ಮಾನವಿ

ಮಾನವಿ: ಇಂದು ತಾಲ್ಲೂಕಿನ ಮದ್ಲಾಪೂರ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ನಡೆದ ಅಮೃತ ಗ್ರಾಮೀಣ ವಸತಿ ಯೋಜನೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಮಾನವಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ಮಾನವಿ  ಮಾತಾನಾಡಿ, ಮನೆ ಮನೆಗೆ ಭೇಟಿ ಕೊಟ್ಟು ಸರ್ವೆ ಮಾಡಿ ಮನೆಯಿಲ್ಲದವರಿಗೆ ಮನೆ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಸದಸ್ಯರುಗಳಿಗೆ ತಿಳಿಸಿದರು.

ಸ್ವಾತಂತ್ರ್ಯ ಬಂದು 75 ವರ್ಷ ಆಗಿರುವುದರಿಂದ ಅಮೃತ ಗ್ರಾಮೀಣ ವಸತಿ ಯೋಜನೆಯನ್ನು ಸರ್ಕಾರ ರೂಪಿಸಿದ್ದು ಬಹಳ ಸಂತೋಷದ ವಿಚಾರ ಮಾನವಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 36 ಗ್ರಾಮ ಪಂಚಾಯಿತಿಗಳು ಇವೆ ಅದರಲ್ಲಿ ಮಾನವಿ ತಾಲ್ಲೂಕಿನ ಮದ್ಲಾಪೂರ,ಪೋತ್ನಾಳ, ಚಿಕ್ಕಕೊಟ್ನಕಲ, ಗ್ರಾಮ ಪಂಚಾಯಿತಿಗಳನ್ನು ಅಮೃತ ಗ್ರಾಮೀಣ ವಸತಿ ಯೋಜನೆಯಲ್ಲಿ ಆಯ್ಕೆ ಮಾಡಿಕೊಂಡಿದ್ದೇನೆ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಗ್ರಾಮಗಳನ್ನು ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಶಾಸಕರು ಹೇಳಿದರು.

ಇದೆ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ, ರಾಜಾ ಆದರ್ಶ ನಾಯಕ, ಗ್ರಾ ಪಂ ಅಧ್ಯಕ್ಷರಾದ ಲಕ್ಷ್ಮೀದೇವಿ ಗಂಡ ವೆಂಕಟೇಶ್ ನಾಯಕ, ಉಪಾಧ್ಯಕ್ಷರಾದ ದುರ್ಗಮ್ಮ ಗಂಡ ಶಿವರಾಯ, ಸದಸ್ಯರುಗಳಾದ ಮರೇಗೌಡ,ರಾಮಣ್ಣ ಭೋವಿ,ಗಂಗಾಧರ ಭಜಂತ್ರಿ,ಮಲಯ್ಯ ಭೋವಿ,ಕಾಶಿನಾಥ,ಮುಂಖಡರಾದ ವೆಂಕಟೇಶ್ ನಾಯಕ ಮದ್ಲಾಪೂರ,ಶರಣಪ್ಪ ಗೌಡ ಮದ್ಲಾಪೂರ, ಜೆ ಎಚ್ ದೇವರಾಜ,ರಶೀದ್ ಖಾನ್, ಗೋಪಾಲ ನಾಯಕ ಹರವಿ,ಹನುಮಂತ ಭೋವಿ, ಲಕ್ಷ್ಮಣ ಯಾದವ, ಹನುಮಪ್ಪ ನಾಯಕ ರಬಣ್ಣಕಲ, ಹುಸೇನಿ ನಾಯಕ ರಬ್ಬಣಕಲ,ತಿಮ್ಮಯ್ಯ ಗುಡಿ ಮನೆ,ಬಸವರಾಜ,ಅಳಪ್ಪ,ತಿಮಣ್ಣ,ಖಾಸಿಂ ಚೀಕಲಪರ್ವಿ, ಚೀಕಲಪರ್ವಿ ಗ್ರಾಮಸ್ಥರು, ಕಾತರಕಿ ಗ್ರಾಮಸ್ಥರು,ರಬ್ಬಣಕಲ್ ಗ್ರಾಮಸ್ಥರು ಉಪಸ್ಥಿತರಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading