ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ಜೆಡಿಎಸ್ ಅಲೆ : ರಾಜುಗೌಡ ಪಾಟೀಲ..!

ಬಸವನ ಬಾಗೇವಾಡಿ : ರಾಜ್ಯದಲ್ಲಿ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಲೆ ಜೋರಾಗಿ ಬಿಸುತ್ತಿದ್ದು ಆರಂಭಿಕ ಹಂತದಲ್ಲಿ ಕ್ಷೇತ್ರದ ಕರಿಭಂಟನಾಳ ಗ್ರಾಮದ ಭೋವಿ ಸಮಾಜದ 50ಕ್ಕು ಹೆಚ್ಚು ಜನರು ಧುರಿಣ ರಾಜುಗೌಡ ಪಾಟೀಲ ಸೇರ್ಪಡೆಗೊಂಡರು.

ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದ ರಾಜುಗೌಡ ಪಾಟೀಲ ನಿವಾಸದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ಷೇತ್ರದ ಪ್ರತಿ ಗ್ರಾಮದ ಕಾರ್ಯಕರ್ತರು ಸಂಪರ್ಕದಲ್ಲಿದ್ದು ಮುಂದಿನ ದಿನಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಸೇರಲಿದ್ದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಅಧಿಕಾರದ ಅವಧಿಯಲ್ಲಿ ಕೈಗೊಂಡ ರೈತರ ಸಾಲಮನ್ನಾ ,ಬಡ್ಡಿ ರಹಿತ ಸಾಲ ವಿತರಣೆ ಸೇರಿದಂತೆ ಹಲವಾರು ರೈತಪರ ಯೋಜನೆಗಳು ಜನರ ಮನಸ್ಸಿನಲ್ಲಿವೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಹೂವಿನ ಹಿಪ್ಪರಗಿ ವಲಯ ಅಧ್ಯಕ್ಷ ಬಸನಗೌಡ ಬಿರಾದಾರ ಯುವ ಘಟಕ ಅಧ್ಯಕ್ಷ ಸಿದ್ದನಗೌಡ ಪಾಟೀಲ ಅಜೀತ ರಾಠೋಡ ಬಂದೇನವಾಜ ಕತ್ನಳ್ಳಿ ಅಪ್ಪಣ್ಣ ಬಂಡಿವಡ್ಡರ ರಾಹುಲ ಬಂಡಿವಡ್ಡರ ಗಿರೀಶ ಬಂಡಿವಡ್ಡರ ದುರ್ಗಪ್ಪ ಬಂಡಿವಡ್ಡರ ಸೀತಾಬಾಯಿ ಬಂಡಿವಡ್ಡರ ಸುಶಿಲಾಬಾಯಿ ಬಂಡಿವಡ್ಡರ ಹಾಗೂ ಕಾರ್ಯಕರ್ತರು ಇದ್ದರು.

Discover more from Valmiki Mithra

Subscribe now to keep reading and get access to the full archive.

Continue reading