ಮಸ್ಕಿ: ಇಂದು ಮಹಾತ್ಮ ಗಾಂಧೀಜಿ ರವರ ಪುಣ್ಯ ಸ್ಮರಣೆಯ ನಿಮಿತ್ಯ ಮಸ್ಕಿ ಮಾಲಿಪಾಟೀಲ್ ಫೌಂಡೇಶನ್ ವತಿಯಿಂದ ವಿವಿಧ ಫೌಂಡೇಶನ್ ವತಿಯಿಂದ ಹಾಗೂ ಅರಣ್ಯ ಇಲಾಖೆಯು ನೆಟ್ಟಿರುವ ಗಿಡಗಳಿಗೆ ನೀರುಣಿಸುವ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಗಚ್ಚಿನ ಮಠ ಇವರ ಅಮೃತ ಹಸ್ತದಿಂದ ಉದ್ಘಾಟನೆ ಮಾಡಲಾಯಿತು.
ವಾಲ್ಮೀಕಿ ಸರ್ಕಲ್ ದಿಂದ ಗಾಂಧೀ ನಗರದವರೆಗೆ ರಸ್ತೆಯ ಪಕ್ಕದಲ್ಲಿ ನೆಡಲಾಗಿರುವ ಗಿಡಗಳು ದಿನ ಕಳೆದಂತೆ ಪ್ರತೀ ದಿನವೂ ಬಿಸಿಲಿನ ತಾಪ ಹೆಚ್ಚಾದಂತೆ ಒಣಗುತ್ತಿದ್ದು ಈ ಎಲ್ಲಾ ಮರಗಳಿಗೆ ನೀರುಣಿಸಿ ಬೇಸಿಗೆಯ ದಾಹ ನೀಗಿಸುವ ಒಂದು ಒಳ್ಳೆ ಕಾರ್ಯಕ್ರಮವನ್ನು ಇಂದಿನಿಂದ ಮಸ್ಕಿ ಮಾಲಿಪಾಟೀಲ್ ಫೌಂಡೇಶನ್ ವತಿಯಿಂದ ಪ್ರಾರಂಭಿಸಲಾಯಿತು. ಹಾಗೆಯೇ ಗಾಂಧೀ ನಗರದ ಡಾ.ಬಿ.ಆರ್ ಅಂಬೇಡ್ಕರ್ ಪುತ್ತಳಿ ಮತ್ತು ಮಹಾತ್ಮ ಗಾಂಧೀಜಿ ರವರ ಪುತ್ತಳಿಯನ್ನು ಕಸ ಗೂಡಿಸಿ ನೀರಿನಿಂದ ಸ್ವಚ್ಚಗೊಳಿಸಲಾಯಿತು.
ನಂತರ ಮಾತನಾಡಿದ ಫೌಂಡೇಶನ್ ನ ಅಧ್ಯಕ್ಷರಾದ ಅಭಿಜಿತ್ ಮಾಲಿ ಪಾಟೀಲ್ ರವರು ಮಾತನಾಡುತ್ತ ಮುಂದಿನ ದಿನಮಾನಗಳಲ್ಲಿ ಬೇಸಿಗೆ ಕಾಲ ಹೆಚ್ಚಾಗುತ್ತಿದ್ದು, ಮಸ್ಕಿ ಪಟ್ಟಣದ ಗಿಡ ಮರಗಳಿಗೆ ಮತ್ತು ಪುರಸಭೆಯ 23 ವಾರ್ಡ್ ನ ಸಾರ್ವಜನಿಕರಿಗೆ ನಿತ್ಯ ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು ಯಾವ ಒಬ್ಬ ವಾರ್ಡ್ ಸಾರ್ಜನಿಕರು ಹಾಗೂ ಗಿಡ ಮರಗಳು ನೀರಿನ ದಾಹದ ವಂಚನೆಗೊಳಗಾಗಲೂ ನಮ್ಮ ಟ್ರಸ್ಟ್ ಬಿಡುವುದಿಲ್ಲ ಎಂಬ ಭರವಸೆಯ ಮಾತುಗಳನ್ನಾಡಿದರು ಹಾಗೂ ಇನ್ನಿತರೆ ಸಾರ್ವಜನಿಕರ ಯಾವುದೇ ಸಮಸ್ಯೆಗಳಿದ್ದರೂ ನಮ್ಮ ಗಮನಕಕ್ಕೆ ತಂದರೆ ನಮ್ಮ ಫೌಂಡೇಶನ್ ತಕ್ಕಮಟ್ಟಿಗೆ ಪರಿಹಾರ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಅಪ್ಪಾಜಿ ಗೌಡ, ಹಳ್ಳಿ ಶಂಕ್ರಪ್ಪ, ಅಭಿಜಿತ್ ಮಾಲಿ ಪಾಟೀಲ್ ಮಸ್ಕಿ, ಕಿರಣ್ ಕುಮಾರ್ ಸಾನಬಾಳ, ಶರಣಯ್ಯ ಗುಡುದೂರು, ನಾರಾಯಣ್ ಠಾಕೂರ್, ಮಲ್ಲಿಕ್ ಮುರಾರಿ ಹಾಗೂ ಮಾಲಿ ಪಾಟೀಲ್ ಫೌಂಡೇಶನ್ ನ ಸರ್ವ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.