ಯಾದಗಿರಿ: ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ದಲಿತ ಸಂಘಟನೆ ಮತ್ತು ರೈತ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ದಲಿತ ಸಂಘದ ಯುವ ಮುಖಂಡರಾದ ಶರಣು ದೋರನಹಳ್ಳಿ ಮತ್ತು ರೈತ ಪರ ಸಂಘಟನೆ ಅಧ್ಯಕ್ಷರಾದ ನಾಗರತ್ನ ಮತ್ತು ಮಲ್ಲಿಕಾರ್ಜುನ ಸತ್ಯಂಪೇಟೆ ಇವರು ಜನವರಿ 26 ನೇ ತಾರೀಖಿನಂದು ಅಂಬೇಡ್ಕರ್ ಅವರ ಫೋಟೋ ತೆಗೆಸಿದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ವಜಾ ಮಾಡುವ ಕುರಿತು ಸಾಂಕೇತಿಕ ಪ್ರತಿಭಟನೆ ಮಾಡಲಾಯಿತು.
ತಾಸಿಲ್ದಾರರು ಆದ ಮಧುಸೂದನ್ ಇವರಿಗೆ ಮನವಿಯನ್ನು ಸಲ್ಲಿಸಿದರು. ಯುವ ಮುಖಂಡರಾದ ಮಲ್ಲಯ್ಯ ಹೊಸಮನಿ, ಗುರ್ರಪ್ಪ ಸುರಪುರ. ಶಿವರಾಜ್ ಶರಣು ರೆಡ್ಡಿ. ಚಂದ್ರಶೇಖರ್ ನಾಟೇಕರ್. ಶರಣು ಅತ್ತಿ ಗುಂಡರ. ಮತ್ತು ಊರಿನ ಮುಖಂಡರು ಇತರರು ಉಪಸ್ಥಿತರಿದ್ದರು.