ಅಪ್ಪು ಸಮಾಧಿ ಬಳಿ ಅಪ್ಪು ಕುಟುಂಬಸ್ಥು ಮೂರನೇ ತಿಂಗಳ ಪುಣ್ಯ ತಿಥಿ ಕಾರ್ಯ ನೆರವೇರಿಸಿದ್ದಾರೆ. ಅಲ್ಲದೇ ಹಲವು ಸಮಾಜಮುಖಿ ಕಾರ್ಯಗಳನ್ನ ನಡೆಸಿದ್ದಾರೆ.
ಇದರಂತೆ, 500 ಸಸಿಗಳನ್ನು ಅಭಿಮಾನಿಗಳಿಗೆ ನೀಡಲಾಗಿದೆ. ಹಾಗೆಯೇ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಅಪ್ಪು ಸಮಾದಿ ಎದುರು ಸ್ಕಿಲ್ ಡಿಪಾರ್ಟ್ಮೆಂಟ್ ವತಿಯಿಂದ ಸಂಜೆ 6 ಘಂಟೆಗೆ ದೀಪೋತ್ಸವ ನಡೆಯಲಿದೆ.
ಈ ಕಾರ್ಯದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ, ಸಹೋದರ ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ಕುಟುಂಬಸ್ಥರು ಭಾಗಿಯಾಗಲಿದ್ದಾರೆ. ನಟ ಶಿವರಾಜ್ಕುಮಾರ್ ಮೈಸೂರಿನಲ್ಲಿ ಚಿತ್ರದ ಕೆಲಸಗಳಲ್ಲಿದ್ದಾರೆ. ಹೀಗಾಗಿ ಶಿವಣ್ಣ ಬರುವುದು ಖಚಿತವಾಗಿಲ್ಲ.
ಪೂಜೆ ನೆರವೇರಿಸಿದ ಬಳಿಕ ಅಪ್ಪು ಬಗ್ಗೆ ರಾಘಣ್ಣ ಮಾತನಾಡಿದ್ದಾರೆ. ‘ಅಪ್ಪು ಅಭಿಮಾನಿಗಳು ಭಕ್ತರಾಗ್ತಿದ್ದಾರೆ. ದಿನದಿಂದ ದಿನಕ್ಕೆ ಪುಣ್ಯಭೂಮಿಗೆ ಬರ್ತಿರುವ ಅಭಿಮಾನಿಗಳ ಸಂಖ್ಯೆ ಜಾಸ್ತಿ ಆಗ್ತಿದೆ. ಅಭಿಮಾನಿಗಳಿಗೆ ಗಿಡ ಕೊಟ್ಟು ನೆಡಿಸಲು ಯೋಚನೆ ಮಾಡಲಾಗಿದೆ. ಅಪ್ಪು ಹುಟ್ಟುಹಬ್ಬದ ವೇಳೆಗೆ ಒಂದು ಲಕ್ಷ ಗಿಡ ನೇಡಲು ಕೆಲಸ ಶುರುವಾಗಿದೆ. ಅಪ್ಪಾಜಿ ಅವರು ಹೇಳಿದ ಹಾಗೆ ನಾನು ಮೊದಲು ಗಿಡ ನೆಟ್ಟು ಆ ಕೆಲಸಕ್ಕೆ ಚಾಲನೆ ಕೊಡಲಾಗಿದೆ. ಅಪ್ಪು ಅಗಲಿಕೆಯ ಮುನ್ನ ಕಾಡಿನಲ್ಲಿ ಕೆಲಸ ಮಾಡಿದ್ರು.ಕಾಡು ಹಸಿರು ಅಪ್ಪುಗೆ ಬಹಳ ಇಷ್ಟ ಹಾಗಾಗಿ ಗಿಡ ನೀಡುವ ಕೆಲಸ ಶುರುವಾಗಿದೆ ಎಂದು ರಾಘಣ್ಣ ಹೇಳಿದರು.