ತುಮಕೂರು: ಸಂವಿದಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ ರವರನ್ನು ಅವಮಾನಿಸಿದ್ದಾರೆಂದು ರಾಯಚೂರು ಜಿಲ್ಲಾ ಸಷನ್ ನ್ಯಾಯದೀಶ ಮಲ್ಲಿಕಾರ್ಜುನಗೌಡರನ್ನು ಸೇವೆಯಿಂದ ಅಮಾನತ್ತುಗೊಳಿಸಿಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಕೆಂಪರಾಜು ಸರ್ಕಾರವನ್ನು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಕರ್ನಾಟಕ ಉಚ್ಚನ್ಯಾಯಲಯ ಮುಖ್ಯನ್ಯಾಯದೀಶರಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ ದಲಿತ ಪರ ಸಂಘಟನೆಯಗಳ ಮುಖಂಡರು ನ್ಯಾಯದೀಶ ಮಲ್ಲಿಕಾರ್ಜುನಗೌಡರ ವಿರುದ್ದ ಘೋಷಣೆ ಕೂಗಿದರು.
ಸಂವಿಧಾನಿಕ ಹುದ್ದುಯಲ್ಲಿರುವು ನ್ಯಾಯದೀಶರು ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಸಂವಿಧಾನ ರಚಿಸಿದ ಅಂಬೇಡ್ಕರ್ ರವರ ಪೋಟೋವನ್ನು ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲಿ ಎಂದು ಹೇಳುವ ಮೂಲಕ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ್ದಾರೆ.
ಇವರು ನ್ಯಾಯದೀಶರ ಹುದ್ದೆಯಲ್ಲಿ ಮುಂದುವರೆಯಲು ಅರ್ಹತೆ ಕಳೆದುಕೊಂಡಿದ್ದಾರೆ, ಸಂಬಂದಿಸಿದ ಇಲಾಖೆ ಮತ್ತು ಅಧಿಕಾರಿಗಳು ಮಲ್ಲಿಕಾರ್ಜುನಗೌಡ ವಿರುದ್ದ ಸುಮುಟೊ ಮತ್ತು ದೇಶ ದ್ರೋಹದ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಅಂಬೇಡ್ಕರ ಸೇನೆ ಜಿಲ್ಲಾಧ್ಯಕ್ಷ ಕೆಂಪರಾಜು ತಿವ್ರ ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಅಂಬೇಡ್ಕರ್ ಸೇನೆಯ ಗುಬ್ಬಿ ತಾಲ್ಲೂಕು ಅಧ್ಯಕ್ಷ ಶಿವಣ್ಣ ಎಂ.ಡಿ. ಶಿವಲಿಂಗಯ್ಯ, ಗಗನ್, ನಾಗರಾಜು, ಕುಪ್ಪೂರು ಶ್ರೀಧರ ನಾಯಕ ವಾಲ್ಮೀಕಿ ರಾಜ್ಯ ಸೇನೆ ಅಧ್ಯಕ್ಷರು ಹಾಗೂ ಪ್ರಧಾನ ವರದಿಗಾರರು ವಾಲ್ಮೀಕಿ ಮಿತ್ರ, ರವಿಕುಮಾರ, ಮಂಜುನಾಥ, ರವಿ ಮತ್ತು ಗಂಗಾಧರ ಸೇರಿದಂತೆ ಅನೇಕ ದಲಿತ ಪರ ಸಂಘಟನೆಗಳ ಮುಂಖಡರು ಹಾಜರಿದ್ದರು.