ಬೆಂಗಳೂರು : ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರು ಸಂಪರ್ಕದಲ್ಲಿದ್ದಾರೆ, ಜೆಡಿಎಸ್ ಬಿಜೆಪಿಯವರು ನಮ್ಮ ಪಕ್ಷಕ್ಕೆ ಕಡಿತವಾಗಿ ಬರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಹಿಲ್ ಗಾರ್ಡನ್ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಸಚಿವರು ಮತ್ತು ಜೆಡಿಎಸ್ ನವರು ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರು ಮತ್ತೆ ಕಾಂಗ್ರೆಸ್ಗೆ ಬಂದೇ ಬರುತ್ತಾರೆ. ಆದರೆ ಯಾರು ಕಾಂಗ್ರೆಸ್ಗೆ ಬರುತ್ತಾರೆ ಎನ್ನುವ ವಿಚಾರ ಸಿದ್ದರಾಮಯ್ಯ ಡಿಕೆಶಿ ಅವರಿಗೆ ಗೊತ್ತು ಎಂದರು.
ಇಲ್ಲಿ ಗುಡುಗು ಸಿಡಿಲು ಮಾಡ್ತಾರೆ ಆದ್ರೆ ಮಳೆ ಮಾತ್ರ ಆಗಲ್ಲ ಎನ್ನುವಂತೆ ಈ ರೀತಿ ಹೇಳಿಕೆ ನೀಡುತ್ತಾರೆ. ಎರಡು ಕಡೆ ರಾಜಕೀಯ ಲಾಭ ಪಡೆಯಲು ಈ ರೀತಿ ಹೇಳಿಕೆ ನೀಡುತ್ತಾರೆ. ರಮೇಶ್ ಜಾರಕಿಹೊಳಿ ಸಚಿವರಾಗಿ ಶಾಸಕರಾಗಿದ್ದರು. ಗೋಕಾಕ್ನಲ್ಲಿ ಒಂದು ಡಿಗ್ರಿ ಕಾಲೇಜು ಇಲ್ಲ ಎಂದು ಸಹೋದರನ ವಿರುದ್ಧ ವ್ಯಂಗ್ಯ ವಾಡಿದರು
ಪಕ್ಷ ಬಿಡುವುದಾಗಿ ಎಂಎಲ್ಸಿ. ಸಿ.ಎಂ.ಇಬ್ರಾಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇಬ್ರಾಹಿಂ ಅವರು ಸಿದ್ದರಾಮಯ್ಯ ಅವರ ಆಪ್ತರು, ಸಿದ್ದರಾಮಯ್ಯ ಅವರೇ ಮಾತುಕತೆ ಮಾಡಿ ಸರಿ ಮಾಡುತ್ತಾರೆ ಎಂದರು.
ಲಖನ್ ಜಾರಕಿಹೊಳಿ ಸೋಲಿಸಿದ್ದು ಬಿಜೆಪಿಯವರನ್ನು ಹೆಂಗೆ ಬಂದಂಗೆ ಲಖನ್ ಹೋಗುವವರು, ವ್ಯಾಪಾರ ಅಷ್ಟೇ, ಕಡಿಮೆ ರೈಟ್ ಇದ್ರು ತರಕಾರಿ ಒಗೆದು ಹೋಗುವ ಬದಲು ಕಡಿಮೆ ರೇಟಿಗೆ ತರಕಾರಿ ವ್ಯಾಪಾರಸ್ಥರು ಮಾರುತ್ತಾರೆ. ಲಕ್ಕನ್ ರಾಜ್ಯ ರಾಜಕಾರಣ ಮಾಡುವ ವ್ಯಕ್ತಿಯಲ್ಲ ಅವನ್ ಏನಿದ್ರೂ ಇಲ್ಲೇ ಗೋಕಾಕ್ ಮುನ್ಸಿಪಾಲಿಟಿಗೆ. ಅಷ್ಟೇ ಅವನ ವ್ಯಾಪ್ತಿ, ಲಖನ್ ಮೊದಲು ತನ್ನ ಶಕ್ತಿಯನ್ನು ನೋಡಿಕೊಳ್ಳಲಿ, ಸಿದ್ದರಾಮಯ್ಯ ಡಿಕೆಶಿ ಬಗ್ಗೆ ಮಾತನಾಡುವ ಯೋಗ್ಯತೆ ಲಖನ್ ಗೆ ಇಲ್ಲ, ತನ್ನ ಇತಿಮಿತಿಯಲ್ಲಿ ಲಖನ್ ರಾಜಕಾರಣ ಮಾಡಬೇಕು ಎಂದರು.
ಲಖನ್ ಕಾಂಗ್ರೆಸ್ಗೆ ಬರುವುದಿಲ್ಲ, ನಾವು ಕರೆಯುವುದಿಲ್ಲ, ಚರ್ಚೆ ಅನವಶ್ಯಕ, ಲಖನ್ ಬಿಜೆಪಿಯಲ್ಲಿದ್ದಾರೆ ಸುಮ್ಮನೆ ವಿಚಾರ ಹೇಳಿ ಲಾಭ ಪಡೆಯಲು ಯತ್ನಿಸುತ್ತಾರೆ. ಎಂದು ಸಿದ್ದರಾಮಯ್ಯ ತನ್ನ ಗುರುಗಳು ಎಂಬ ಲಖನ್ ಹೇಳಿಕೆಗೆ ಪ್ರತಿಕ್ರಿಯಿಸಿದರು.