ದಕ್ಷ ಪೊಲೀಸ್ ಅಧಿಕಾರಿಯಾಗಿ ಹೆಸರು ಮಾಡಿರುವ ರವಿ ಡಿ. ಚನ್ನಣ್ಣನವರ್ ಅವರು, ಕರ್ತವ್ಯ ಪಾಲನೆ, ಪ್ರಾಮಾಣಿಕತೆಯಿಂದಲೇ ಹೆಸರು ಮಾಡಿದ್ದಾರೆ.ಇದೀಗ ಶ್ರೀ ಮಹರ್ಷಿ ವಾಲ್ಮೀಕಿ ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಕವಾಗಿದ್ದು ಐಪಿಎಸ್ ರವಿ ಡಿ ಚನ್ನಣ್ಣನವರ್ ರವರಿಗೆ ಶುಭಾಶಯಗಳು
ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರು ಈಗಾಗಲೇ ತಮ್ಮ ಮಾತು, ನಡೆ, ಕರ್ತವ್ಯ ಪಾಲನೆ, ಪ್ರಾಮಾಣಿಕತೆಯಿಂದಲೇ ಹೆಸರು ಮಾಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಖಡಕ್ ಎನಿಸುವ ಅವರು, ಮಾತನಾಡುತ್ತಿದ್ದರೆ ಕೇಳುತ್ತಲೇ ಇರಬೇಕು ಎನಿಸುತ್ತದೆ. ಅಷ್ಟೊಂದು ಸೊಗಸಾಗಿ ಜೀವನ ಮೌಲ್ಯಗಳನ್ನು ತಮ್ಮ ಮಾತುಗಳಲ್ಲಿ ಹೇಳುತ್ತಾರೆ.