ತುಮಕೂರು: ಇಂದು ಹೋಟೆಲ್ ಸಮೃದ್ದಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ.ಎಸ್.ಟಿ ನೌಕರರ ಸಮನ್ವಯ ಸಮಿತಿ ತುಮಕೂರು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗು ಸ್ವಾಯುತ್ಥ ಸಂಸ್ಥೆ ಪ.ಜಾತಿ. ಪ.ಪಂಗಡ ಸರ್ಕಾರಿ ನೌಕರರ (ರಿ) ತುಮಕೂರು ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಅಕ್ಷರದವ್ವ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿಪುಲೆರವರ ಜಯಂತಿ ಹಾಗು 2022 ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿದ್ದರು.
ಇನ್ನು ಇದೇ ವೇಳೆ ಕ್ಯಾಲೆಂಡರ್ ಬಿಡುಗಡೆ ಮಾಡಿದ ತುಮಕೂರು ಜಿಲ್ಲೆಯ ವಿಧಾನಪರಿಷತ್ ಸದಸ್ಯರಾದ ಶ್ರೀ ಆರ್ ರಾಜೇಂದ್ರರವರನ್ನು ಸನ್ಮಾನಿಸಲಾಯಿತು.