ಯಾದಗಿರಿ: ನಟ ದಿ. ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣವನ್ನು ಜಿಲ್ಲೆಯ ಶಹಾಪುರ ತಾಲೂಕಿನ ಕೊಳೂರು ಎಂ ಗ್ರಾಮದಲ್ಲಿ ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶ್ರೀ ವೆಂಕಟರೆಡ್ಡಿ ಗೌಡ ಮುದ್ನಾಳ ನೆರವೇರಿಸಿದರು .
ಗ್ರಾಮದ ಮುಖಂಡರಾದ ಬಸಣ್ಣಬಂಗಿ , ವೆಂಕಟೇಶ್ ದಳಪತಿ ಮಲ್ಲಿಕಾರ್ಜುನ್ ಮಾಸ್ತಿ , ಹನುಮಂತ್ರಾಯ ಬೆಣಕಲ್ ,ಹೊನ್ನಯ್ಯ ಗಟ್ಟಿ ,ಬಸನಗೌಡ ಪೊಲೀಸ್ ಪಾಟೀಲ್ ಟೊಣ್ಣುರು ವೀರಣ್ಣಗೌಡ ಪೊಲೀಸ್ ಪಾಟೀಲ್ ಟೊಣ್ಣರು ಅಂಬಲಯ ಕವಲಿ ಎಲ್ಲರೂ ಸೇರಿ ಅನಾವರಣ ಮಾಡಿದರು .
ಪುನೀತ್ ರಾಜಕುಮಾರ್ ಅಭಿಮಾನಿಗಳಾದ ಸುರೇಶ್ ಶುಭ ಕೋರಿದರು. ರಾಘವೇಂದ್ರ ರಾಜಕುಮಾರ್ ವಿಡಿಯೋ ಕಾಲ್ ಮಾಡಿ ಅಭಿಮಾನಿಗಳಿಗೆ ಶುಭಹಾರೈಸಿದರು.