ಯಾದಗಿರಿ: ಜಿಲ್ಲೆ ಸುರಪುರ ತಾಲೂಕಿನ ಸುರಪುರ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯಸ್ಥರಿಗೆ, ಯುವ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು,
ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸರಕಾರಿ ಮುಖ್ಯ ಕಚೇರಿಗಳಲ್ಲಿ ಬ್ಯಾಂಕುಗಳಲ್ಲಿ ವೃದ್ಧರು ಮತ್ತು ಅಂಗವಿಕಲರು ಸರತಿ ಸಾಲಿನಲ್ಲಿ ನಿಂತು ವ್ಯವಹಾರ ಮಾಡಲು ಸಾಧ್ಯವಾಗದ ಕಾರಣ ಹಲವಾರು ಗಂಟೆಗಳ ಕಾಲ ನಿಂತು ಮತ್ತು ಜನರ ನೂಕುನುಗ್ಗಾಟಗಳಿರುವುದರಿಂದ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು , ಆದಕಾರಣ ವೃದ್ಧರಿಗೆ ಮತ್ತು ಅಂಗವಿಕಲರಿಗೆ ಪ್ರತ್ಯೇಕ ಕೌಂಟರ್ ನಿರ್ಮಿಸಬೇಕು ಮತ್ತು ಇಲ್ಲಿ ಬ್ಯಾಂಕಿಗೆ ಬರುವ ಗ್ರಾಹಕರು ರೈತರು ವ್ಯಾಪಾರಸ್ಥರಿಗೆ ಕನ್ನಡದಲ್ಲಿ ವ್ಯವಹರಿಸಬೇಕು ಮತ್ತು ಬ್ಯಾಂಕಿನ ಅಧಿಕಾರಿಗಳು ಸಿಬ್ಬಂದಿಗಳು ಕನ್ನಡದಲ್ಲಿ ಮಾತನಾಡಬೇಕು, ಬ್ಯಾಂಕಿಗೆ ಬರುವ ಗ್ರಾಹಕರಿಗೆ ವಾಹನಗಳ ನಿಲ್ಲಿಸಲು ಪಾರ್ಕಿಂಗ್ ಮಾಡಬೇಕು ಮುಂದಿನ ದಿನಗಳಲ್ಲಿ ಇಂತಹ ತೊಂದರೆಗಳು ಬಾರದಂತೆ ನೋಡಿಕೊಳ್ಳಬೇಕೆಂದು ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು,
ಇದೇ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷರು ತಿಮ್ಮಪ್ಪ ಹೆಳವಾರ, ತಾಲೂಕ್ ಉಪಾಧ್ಯಕ್ಷರಾದ ಸಚಿನ್ ನಾಯಕ , ತಾಲೂಕು ಗೌರವಧ್ಯಕ್ಷ ರಾಜ ಚೆನ್ನಪ್ಪ ನಾಯಕ, ತಾಲೂಕು ಕಾರ್ಯದರ್ಶಿ ರಫೀಕ್ ಶಾ, ತಾಲೂಕು ಯುವ ಘಟಕ ಅಧ್ಯಕ್ಷ ನಬಿಶ ,ಖಜಾಂಚಿ ಮಂಜುನಾಥ್, ಮತ್ತು ತಾಲೂಕು ಯುವ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.