ತುಮಕೂರು: ಜಿಲ್ಲೆ ಕೊರಟಗೆರೆ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ಪಕ್ಷದ ಬಾವುಟವನ್ನು ಸರ್ಕಾರಿ ಜಾಗದಲ್ಲಿ ಆರಿಸಿದ್ದು , ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣ ಪಂಚಾಯ್ತಿ ಯಾರಪ್ಪನ ಪಕ್ಷದ ಸ್ವತ್ತು ಅಲ್ಲಾ, ಜನರ ತೆರಿಗೆ ಹಣ. ಪ್ರಜೆಗಳ ಸ್ವತ್ತು. ನಮ್ಮ ಸ್ವತ್ತು. ನೀವು ಸಂಭ್ರಮಾಚರಣೆ ಮಾಡಿ ಆದರೆ ದೇಶದ ದ್ವಜ ಹಾರಾಡುವ ಜಾಗದಲ್ಲಿ ಯಾವುದೇ ಪಕ್ಷದ ಬಾವುಟ ಹಾರಿಸುವುದು ಸರಿಯಲ್ಲ , ಅದರಲ್ಲೂ ಸರ್ಕಾರಿ ಕಟ್ಟಡದಲ್ಲಿ ಪಕ್ಷದ ಬಾವುಟ ಹಾರಿಸುವುದು ಅಪರಾದ ಎಂದು ವಿಜಯಕಾಲ ದಿನಪತ್ರಿಕೆ ಸಂಪಾದಕರಾದ ಪಿವಿ. ನೃಪತುಂಗ ಹೇಳಿದ್ದಾರೆ.