ಚಿತ್ರದುರ್ಗ: ಡಾ. ಬಿ ಎಲ್ ವೇಣು ಅವರ ದುರ್ಗದ ಬೇಡರ್ದಂಗೆ ಎಂಬ ಚಾರಿತ್ರಿಕ ಕಾದಂಬರಿ ಇದು ಬಿಡುಗಡೆಯಾಗಿದೆ. ಚಿತ್ರದುರ್ಗದ ಐಶ್ವರ್ಯ ಫೋರ್ಟ್ , ಡಾ. ಬಿ ಎಲ್ ವೇಣು ವೃತ್ತದ ಬಳಿ ಕಾರ್ಯಕ್ರಮ ನಡೆದಿದೆ.
ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರಿನ ಇತಿಹಾಸ ಸಂಶೋಧಕರು ಹಾಗೂ ಆಯುರ್ವೇದಿಕ್ ವೈದ್ಯರು ಆದ ಡಾ. ಬಿ ನಂಜುಂಡ ಸ್ವಾಮಿ ವಹಿಸಿಕೊಂಡಿದ್ದರು. ಕೃತಿ ಬಿಡುಗಡೆಯನ್ನು ಬೆಂಗಳೂರಿನ ವಿಮರ್ಶಕರು ಸಾಹಿತಿ ಚಿಂತಕರು ಆದ ಡಾ. ಬಂಜಗೆರೆ ಜಯಪ್ರಕಾಶ್ ಬಿಡುಗಡೆಗೊಳಿಸಿದರು.
ಇನ್ನು ಮುಖ್ಯ ಅತಿಥಿಗಳಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆದ ಶ್ರೀ ಎಂ ಸಿ ರಘು ಚಂದನ್ ಉಪಸ್ಥಿತರಿದ್ದಾರು. ಕೃತಿ ಕುರಿತು ವಿಮರ್ಶಕರು ಆದ ತುಮಕೂರಿನ ಸಾಹಿತಿಗಳು ಆದ ಡಾ. ಜಿ.ವಿ ಅನಂತಮೂರ್ತಿ ಕೂಡ ಆಗಮಿಸಿದ್ದರು. ಪ್ರಕಾಶಕರು ಗೀತಾಂಜಲಿ ಪುಸ್ತಕ ಪ್ರಕಾಶನ ಶಿವಮೊಗ್ಗ ಜಿಟಿಟಿ ಮೋಹನ್ ಕುಮಾರ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮತ್ತು ಕೃತಿಕಾರರದ ಡಾ. ಬಿ ಎಲ್ ವೇಣು, ಸೃಷ್ಟಿ ಕಾರ ಪ್ರಕಾಶನ ಚಿತ್ರದುರ್ಗ ಮೇಘ ಗಂಗಾಧರ ನಾಯಕ್ ಕೂಡ ಆಗಮಿಸಿದ್ದರು.
ಇನ್ನು ಕಾರ್ಯಕ್ರಮದ ನಿರೂಪಣೆಯನ್ನು ಡಾ. ಕರಿಯಪ್ಪ ಮಾಳಿಗೆ ಪ್ರಾಧ್ಯಪಕರು ನಡೆಸಿಕೊಟ್ಟರು. ಇನ್ನು ಸ್ವಾಗತವನ್ನು ಪತ್ರಕರ್ತರಾದ ಚಿಕ್ಕಪ್ಪನಹಳ್ಳಿ ಷಣ್ಮುಖ ನಡೆಸಿಕೊಟ್ಟರು. ಇನ್ನು ವಂದನಾರ್ಪಣೆ ಕಾರ್ಯಕ್ರಮವನ್ನು ಕೊನೆಯದಾಗಿ ಮದಕರಿನಾಯಕ ಸಾಂಸ್ಕೃತಿಕ ಕೇಂದ್ರ ಚಿತ್ರದುರ್ಗ ಡಿ ಗೋಪಾಲಸ್ವಾಮಿ ನಾಯಕ್ ನಡೆಸಿಕೊಟ್ಟರು.