ಸುರಪುರ : ತಾಲ್ಲೂಕಿನ ದೇವರಗೋನಾಲ ಗ್ರಾಮದ ಬಡ ಪ್ರತಿಭೆಯಾಗಿರುವ ಮರೆಪ್ಪ ತಂದೆ ಭೀಮಪ್ಪ ಗುರಿಕಾರ ಇವರು ಒಂದು ತಿಂಗಳವರೆಗೆ ನೆಹರು ಸ್ಟೇಡಿಯಂ ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಪುರುಷರ ಅಲ್ಟಿಮೇಟ್ ಖೋ ಖೋ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.
ಈ ಹಿನ್ನಲೆಯಲ್ಲಿ ಸುರಪುರ ಮತ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ನರಸಿಂಹ ನಾಯಕ ರಾಜುಗೌಡರವರು ಯುವಕನ ಸಾಧನೆಯನ್ನು ಮೆಚ್ಚಿ ವೈಯಕ್ತಿಕವಾಗಿ 25000 ರೂ. ಪ್ರೋತ್ಸಾಹ ಧನದ ಚೆಕ್ ಅನ್ನು ಯುವಕನ ತಂದೆ ಭೀಮಪ್ಪ ಗುರಿಕಾರ ಇವರಿಗೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶ್ರೀ ಸಣ್ಣ ದೇಸಾಯಿ, ಶ್ರೀ ದೇವಿಂದ್ರಪ್ಪಗೌಡ ಮಾಲಿಪಾಟೀಲ್, ಶ್ರೀ ಸಕ್ರೆಪ್ಪ ಬಾಗಲಿ, ಶ್ರೀ ಡೀಜಲ್ ದೇಸಾಯಿ, ಶ್ರೀ ಈಶ್ವರ ನಾಯಕ, ಶ್ರೀ ಶರಣಗೌಡ ದೈಹಿಕ ಶಿಕ್ಷಕರು, ಶ್ರೀ ಭೀಮರಾಯ ದೈಹಿಕ ಶಿಕ್ಷಕರು, ದೇವು ದೊರೆ, ಚಂದ್ರು ನಾಯಕ ಇನ್ನೂ ಅನೇಕ ಮುಖಂಡರು ಹಾಜರಿದ್ದರು.