ಬೆಂಗಳೂರು: ಸ್ಯಾಂಡಲ್ವುಡ್ ಯುವರಾಜ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಇಂದು ತಮ್ಮ 32 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.. ಹೀಗಾಗಿ ಚಿತ್ರರಂಗದ ಅನೇಕ ಗಣ್ಯರು ಸೇರಿ ಅಭಿಮಾನಿಗಳು ನಿಖಿಲ್ ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ
ನಿಖಿಲ್ ಕುಮಾರಸ್ವಾಮಿಗೆ ಈ ಬಾರಿಯ ಹುಟ್ಟುಹಬ್ಬ ವಿಶೇಷವಾಗಿರಲಿದೆ. ನಿಖಿಲ್ ಇತ್ತೀಚೆಗಷ್ಟೆ ತಂದೆಯಾಗಿದ್ದು, ಅಪ್ಪನಾಗಿ ಅವರಿಗೆ ಇದು ಮೊದಲ ಹುಟ್ಟುಹಬ್ಬ. ಈ ಬಾರಿಯ ಹುಟ್ಟುಹಬ್ಬಕ್ಕೆ ಮಗನೂ ಜೊತೆಗಿರಲಿದ್ದಾನೆ.
ಡಿ.24ರಂದು ನಿಖಿಲ್ ಕುಮಾರಸ್ವಾಮಿ ನಟನೆಯ ರೈಡರ್ ಸಿನಿಮಾ ಬಿಡುಗಡೆಯಾಗಿ ಭರ್ಜರಿಯಾಗಿ ಯಶಸ್ಸು ಕಂಡಿತ್ತು.ಜೊತೆಗೆ ಚಿತ್ರತಂಡಕ್ಕೆ ಪೈರಸಿ ಹಾವಳಿ ಶುರುವಾಗಿದ್ದರಿಂದ ನಿಖಿಲ್ ಬಾರಿ ಬೇಸರ ಪಟ್ಟುಕೊಂಡಿದ್ದರು.