ಗುಬ್ಬಿ: ತಾಲೂಕಿನ ನಿಟ್ಟೂರು ಹೇರೂರು ಹತ್ತಿರ ಇರುವ ಶ್ರೀಮತಿ ಇಂದಿರಾ ಗಾಂಧಿ ವಸತಿ ನಿಲಯದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಕೆಮ್ಮು ನೆಗಡಿ ಲಕ್ಷಣಗಳು ಕಂಡು ಬಂದಿದ್ದು ಎಲ್ಲಾ ಮಕ್ಕಳಿಗೂ ಫೆಬ್ರವರಿ ಒಂದನೇ ತಾರೀಕಿನ ತನಕ ರಜೆಯನ್ನು ಘೋಷಿಸಲಾಗಿದೆ.
ಕರ್ನಾಟಕದಲ್ಲಿ ಕೋವಿಡ್ ನಾಗಾಲೋಟ ಮುಂದುವರಿದಿದ್ದು, ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ.ನಿನ್ನೆ ನಿನ್ನೆ ಕೂಡ ಹೊಸ ಪ್ರಕರಣಗಳ ಸಂಖ್ಯೆ 50 ಸಾವಿರ ಸಮೀಪಿಸಿದೆ. ಹೀಗಾಗಿ ಮೊದಲೇ ಶಾಲೆಗೆ ರಜೆಯನ್ನು ನೀಡಲಾಗಿದೆ.