ಬೆಂಗಳೂರು: ಅಪ್ಪು ಅಭಿಮಾನಿಗಳು ಖುಷಿ ಪಡೋಕೆ ಮತ್ತೊಂದು ಕಾರಣ ಸಿಕ್ಕಿದೆ. ಅಮೇಜಾನ್ ಪ್ರೈಮ್ ಪುನೀತ್ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ಒಂದನ್ನು ಕೊಡುತ್ತಿದೆ.
ಪುನೀತ್ ರಾಜ್ಕುಮಾರ್ ನೆನಪಿಗಾಗಿ ಅವರ ಮಾಲೀಕತ್ವದ ಪಿಆರ್ಕೆ ಸ್ಟುಡಿಯೋದ ಹೊಸ ಮೂರು ಸಿನಿಮಾಗಳ ಎಕ್ಸ್ಕ್ಲೂಸಿವ್ ಪ್ರೀಮಿಯರ್ ಘೋಷಿಸಿದೆ. ಜೊತೆಗೆ ಅವರ ಪ್ರೊಡಕ್ಷನ್’ನ ಹಿಂದಿನ ಐದು ಸಿನಿಮಾಗಳನ್ನು ಎಲ್ಲರಿಗೂ ಉಚಿತವಾಗಿ ವೀಕ್ಷಿಸುವ ಅವಕಾಶವನ್ನು ಅಮೇಜಾನ್ ಪ್ರೈಮ್ ನೀಡುತ್ತಿದೆ.
ಪಿಆರ್ಕೆ ಪ್ರೊಡಕ್ಷನ್ಸ್ನಿಂದ ‘ಮ್ಯಾನ್ ಆಫ್ ದಿ ಮ್ಯಾಚ್’, ‘ಒನ್ ಕಟ್ ಟು ಕಟ್’ ಮತ್ತು ‘ಫ್ಯಾಮಿಲಿ ಪ್ಯಾಕ್’ ಸಿನಿಮಾಗಳ ಎಕ್ಸ್ಕ್ಲೂಸಿವ್ ವರ್ಲ್ಡ್ ಪ್ರೀಮಿಯರ್ ಘೋಷಿಸಲಾಗಿದೆ. ಜೊತೆಗೆ ಅವರದ್ದೇ ಬ್ಯಾನರ್’ನ ಕವಲುದಾರಿ, ಮಾಯಾಬಜಾರ್, ಲಾ, ಫ್ರೆಂಚ್ ಬಿರಿಯಾನಿ ಹಾಗೂ ಪುನೀತ್ ಅಭಿನಯದ ಯುವರತ್ನ ಸಿನಿಮಾವನ್ನು ವೀಕ್ಷಿಸಬಹುದಾಗಿದೆ.
ಪುನೀತ್ ರಾಜ್ಕುಮಾರ್ ಅವರ ಇತ್ತೀಚಿನ ಐದು ಅತ್ಯಂತ ಜನಪ್ರಿಯ ಸಿನಿಮಾಗಳನ್ನು ಫೆಬ್ರವರಿ 1 ರಿಂದ ಎಲ್ಲರಿಗೂ ಉಚಿತವಾಗಿ ನೋಡಬಹುದಾಗಿದೆ. ಫೆಬ್ರವರಿ 28ರವರೆಗೆ ಅಂದರೆ ಪೂರ್ತಿ ಒಂದು ತಿಂಗಳು ಅಮೇಜಾನ್ ಪ್ರೈಮ್’ನಲ್ಲಿ ಈ ಸಿನಿಮಾಗಳನ್ನು ನೋಡಿ ಆನಂದಿಸಬಹುದಾಗಿದೆ.
ಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿ ಸುಮಾರು ಮೂರು ತಿಂಗಳು ಆಗುತ್ತಾ ಬಂತು. ಆದ್ರೆ ಕನ್ನಡಿಗರ ಮನೆ ಮನಗಳಲ್ಲಿ ಅಪ್ಪು ಎಂದಿಗೂ ಅಮರ. ‘ರಾಜಕುಮಾರ’ ದೈಹಿಕವಾಗಿ ನಮ್ಮನ್ನು ಅಗಲಿರಬಹುದು. ಆದ್ರೆ ನೆನಪುಗಳ ಮೂಲಕ ಅವರು ನಮ್ಮೊಂದಿಗಿದ್ದಾರೆ. ಅವರ ಸಿನಿಮಾಗಳ ಮೂಲಕ, ಅವರ ಸಾಮಾಜಿಕ ಸೇವೆಗಳ ಮೂಲಕ ಚಿರಸ್ಥಾಯಿಯಾಗಿರ್ತಾರೆ. ಅಪ್ಪು ಅಮರ ಅಂತ ಅಭಿಮಾನಿಗಳು ಹೇಳ್ತಿದ್ದಾರೆ.