ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಕೃಷಿ ಇಲಾಖೆಯವತಿಯಿಂದ ತಾಲ್ಲೂಕಿನ ಕೃಷಿ ಕಛೇರಿಯಲ್ಲಿ ಶ್ರೀ ಡಾ. ಶ್ರೀಧರ ಸತ್ಯ ನಾರಾಯಣ ರವರ ನೇತೃತ್ವದಲ್ಲಿ ಕುರಿ ಸಾಕಾಣಿಕೆಯ ಬಗ್ಗೆ ಒಂದು ದಿನದ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಈ ತರಬೇತಿಯಲ್ಲಿ ಅಮರೇಶ ಪೊ.ಪಾಟೀಲ ಗ್ರಾಮ ಪಂಚಾಯಿತಿ ಸದಸ್ಯರು ಊಟದ, ಅಂಜನೇಯ್ಯ ನಾಯಕ, ಬಿಜೆಪಿ ಯುವ ಮುಖಂಡರಾದ ಸುಣ್ಣದಕಲ್, ಶಿವಪ್ಪ ನಾಯಕ ಅಧ್ಯಕ್ಷರು. ಮಹರ್ಷಿ ವಾಲ್ಮೀಕಿ ನಾಯಕ ಸ್ವಾಭಿಮಾನ ಚಳುವಳಿ ತಾಲ್ಲೂಕ ಸಮಿತಿ ದೇವದುರ್ಗ, ಇತರರು ಭಾಗವಹಿಸಿದ್ದರು.