ಕಡಲೆ ಬೆಳೆಯಲ್ಲಿದೆ ಆರೋಗ್ಯಕಾರಿ ಪ್ರಯೋಜನಗಳು..!

ಸಾಮಾನ್ಯವಾಗಿ ಎಲ್ಲಾ ರೀತಿಯ ಬೇಳೆಕಾಳುಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಆದ್ದರಿಂದ, ಬೇಳೆಕಾಳುಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಡಲೆಬೇಳೆ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶವನ್ನು ಒದಗಿಸುವುದಲ್ಲದೆ ವಿವಿಧ ರೀತಿಯ ಪಾಕ ವಿಧಾನಗಳನ್ನು ತಯಾರಿಸಬಹುದು.

ವಾಸ್ತವವಾಗಿ ಕಡಲೆ ಬೇಳೆಯಿಂದ ಅನೇಕ ಲಾಭಗಳಿವೆ. ಇದು ಸಸ್ಯಾಹಾರಿಗಳಿಗೆ ಪ್ರೋಟೀನ್ ನ ಉತ್ತಮ ಮೂಲ. ಇದರಲ್ಲಿ ಬಿ-ಕಾಂಪ್ಲೆಕ್ಸ್ ವಿಟಮಿನ್ಸ್ ಅಧಿಕವಾಗಿದ್ದು, ಇದು ಗ್ಲುಕೋಸ್ ಚಯಾಪಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ ಇದು ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದ್ದು, ದೇಹದ ಭಾಗಗಳನ್ನು ಉರಿಯೂತದಿಂದ ರಕ್ಷಿಸುತ್ತದೆ.

ತೂಕ ಇಳಿಸುತ್ತದೆ

ಕಡಲೆ ಬೇಳೆಯಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್ ಮತ್ತು ಕ್ಯಾಲೊರಿಗಳು ಕಡಿಮೆ. ಇದನ್ನು ನಿಯಮಿತವಾಗಿ ತಿನ್ನುವುದರಿಂದ ತೂಕ ನಿಯಂತ್ರಣದಲ್ಲಿಡುತ್ತದೆ. ಆದುದರಿಂದ ಇದನ್ನು ತಪ್ಪದೇ ಆಹಾರದಲ್ಲಿ ಸೇವಿಸಿ.  ಇದು ಆರೋಗ್ಯಯುತವಾಗಿ ತೂಕ ಇಳಿಕೆ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ

ಪ್ರತಿದಿನ 30 ಗ್ರಾಂ ಕಡಲೆಬೇಳೆ ಸೇವಿಸುವುದರಿಂದ 6 ರಿಂದ 7 ಗ್ರಾಂ ಪ್ರೋಟೀನ್ ಲಭ್ಯವಾಗುತ್ತದೆ. ಆದ್ದರಿಂದ ಇದನ್ನು ಆರೋಗ್ಯಕರ ಸೂಪರ್ ಫುಡ್ ಎಂದು ಪರಿಗಣಿಸಲಾಗುತ್ತದೆ. ಈ ಬೇಳೆಯನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ರೋಗಗಳನ್ನು ದೂರವಿಡುತ್ತದೆ.

ಕೂದಲು ಸ್ಪ್ಲಿಟ್ ಆಗುವುದನ್ನು ತಡೆಯುತ್ತದೆ

ಒಡೆದ ಕೂದಲು ಅಥವಾ ಕೂದಲು ಹಾನಿಯಿಂದ ಬಳಲುತ್ತಿದ್ದರೆ, ಕಡಲೆ ಬೇಳೆಯನ್ನು ನಿಯಮಿತವಾಗಿ ಸೇವಿಸಬೇಕು. ಇದರಲ್ಲಿ ಫೋಲಿಕ್ ಆಮ್ಲ ಸಮೃದ್ಧವಾಗಿದೆ, ಇದು ನೆತ್ತಿಯನ್ನು ಪೋಷಿಸುತ್ತದೆ ಮತ್ತು ಬೇರಿನಿಂದ ಕೂದಲನ್ನು ಬಲಪಡಿಸುತ್ತದೆ. ಇದರಿಂದ ಕೂದಲು ಒಡೆಯುವ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.

ಮಧುಮೇಹ ನಿಯಂತ್ರಣಕ್ಕೆ

ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು, ಮಧುಮೇಹಿಗಳಿಗೆ ಇದು ಪ್ರಯೋಜನಕಾರಿ. ಇದು ಫೈಬರ್ ಅಂಶವನ್ನು ಹೊಂದಿದ್ದು, ಗ್ಲುಕೋಸ್ ಅನ್ನು ರಕ್ತದ ಪ್ರವಾಹಕ್ಕೆ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ.

 

Discover more from Valmiki Mithra

Subscribe now to keep reading and get access to the full archive.

Continue reading