ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಮನ್ವಿ ನಿವಾಸಕ್ಕೆ ಸಚಿವ ಸೋಮಶೇಖರ್ ಭೇಟಿ

ಬೆಂಗಳೂರು: ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋ ಮೂಲಕ ರಾಜ್ಯದ ಮನೆ ಮಾತಾಗಿದ್ದ ಪುಟಾಣಿ ಸಮನ್ವಿ ಈಚೆಗಷ್ಟೇ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಳು. ಮುದ್ದಿನ ಮಗಳ ಅಗಲಿಕೆ ಅಮೃತಾ ನಾಯ್ಡು ದಂಪತಿಗೆ ತೀವ್ರ ನೋವನ್ನುಂಟು ಮಾಡಿದೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಾಲಕಲಾವಿದೆ ಸಮನ್ವಿ ತಂದೆ ರೂಪೇಶ್ ಹಾಗೂ ತಾಯಿ ಅಮೃತ ನಾಯ್ಡು ಅವರನ್ನು ಭೇಟಿ ಮಾಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಗುಬ್ಬಲಾಳದಲ್ಲಿನ ಸಮನ್ವಿ ನಿವಾಸಕ್ಕೆ ತೆರಳಿದ ಸಚಿವರು, ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿ, ಸಾಂತ್ವನ ಹೇಳಿದರು. ಸಮನ್ವಿ ಬಾಲ ಕಲಾವಿದೆಯಾಗಿ ಜನರ ಮನಗೆದ್ದಿದ್ದಳು. ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಸಮನ್ವಿ ಚಿಕ್ಕ ವಯಸ್ಸಿನಲ್ಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದಳು. ಆಕೆಯ ಸಾವು ನಿಜಕ್ಕೂ ದುರದೃಷ್ಟಕರ. ಅವರ ಕುಟುಂಬವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು.

ಕೋಣನಕುಂಟೆಯ ವಾಜರಹಳ್ಳಿಯ ಬಳಿ ಪುತ್ರಿ ಸಮನ್ವಿ ಜೊತೆಗೆ ಅಮೃತಾ ನಾಯ್ಡು ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಆ ವೇಳೆ ಟಿಪ್ಪರ್ ಲಾರಿಯೊಂದು ಅಮೃತಾ ಮತ್ತು ಸಮನ್ವಿ ಇದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 6 ವರ್ಷದ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದಳು. ಅಮೃತಾಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾರಿ ಚಾಲಕನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ಮುಂದುವರಿಸಿದ್ದಾರೆ.

Discover more from Valmiki Mithra

Subscribe now to keep reading and get access to the full archive.

Continue reading