ಬೆಂಗಳೂರು: ಕರಾವಳಿ ಮೂಲದ ಅನುಶ್ರೀ ಸದ್ಯ ಕರ್ನಾಟಕದ ಪ್ರತಿಭಾವಂತ ಆ್ಯಂಕರ್ ಆಗಿ ಗುರುತಿಸಿಕೊಂಡಿದ್ದಾರೆ. ಇದುವರೆಗೆ ಸಾಕಷ್ಟು ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡಿದ್ದಾರೆ. ಮಾತ್ರವಲ್ಲದೆ ಖಾಸಗಿ ಕಾರ್ಯಕ್ರಮದ ಜೊತೆಗೆ ಜನಪ್ರಿಯ ಟಿವಿ ಶೋಗಳನ್ನು ಮಾಡುತ್ತಾ ಬಂದಿದ್ದಾರೆ. ಪ್ರಾರಂಭದಲ್ಲಿ ಪ್ರಾದೇಶಿಕ ಚಾನೆಲ್ನಲ್ಲಿ ಆ್ಯಂಕರಿಂಗ್ ಮಾಡುತ್ತಿದ್ದವರು, ತಮ್ಮ ಶ್ರಮ ಮತ್ತು ಪ್ರತಿಫಲದ ಮೂಲಕ ಸ್ಟೇಟ್ ಲೆವೆಲ್ ಚಾನೆಲ್ನಲ್ಲಿ ಆ್ಯಂಕರ್ ಆಗಿ ಗುರುತಿಸಿಕೊಳ್ಳುವಂತೆ ತಮ್ಮ ಕೌಶಲ್ಯವನ್ನು ತೋರಿಸಿದ್ದಾರೆ.
ಅನುಶ್ರೀ ಅವರ ಮುದ್ದಿನ ನಾಯಿಮರಿ ಚಿನ್ನು ಅಗಲಿಕೆಯ ನೋವಿನ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವರ್ಷ ಕಳೆದುಕೊಂಡವರ ದುಃಖದ ನೋವಿನ ಜೊತೆಗೆ ಮುದ್ದಿನ ನಾಯಿಮರಿಯೂ ಕೂಡ ದೂರವಾದ ಬೇಸರವನ್ನು ಅನುಶ್ರೀ ಹೇಳಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ನಾಯಿ ಮರಿಯನ್ನು ತಬ್ಬಿಕೊಂಡು, ಅದಕ್ಕೊಂದು ಮುತ್ತನಿಡುವ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ‘‘ದೇವರ ಬೆರಳುಗಳು ಆತನನ್ನು ಸ್ಪರ್ಶಿಸಿವೆ. ಆತನೀಗ ನಿದ್ರಿಸಿದ್ದಾನೆ’’ ಎಂದು ಬೇಸರದ ಅಡಿಬರಹವನ್ನು ನೀಡಿದ್ದಾರೆ.