ಸರ್ವರೋಗಕ್ಕೂ ರಾಮಬಾಣ ‘ಅಮೃತಬಳ್ಳಿ’

ಅಂದಿನಿಂದ ಇಂದಿನವರೆಗೆ ಅಮೃತಬಳ್ಳಿ ಹೆಸರಿಗೆ ತಕ್ಕಂತೆ ತನ್ನ ಛಾಪನ್ನು ಉಳಿಸಿಕೊಂಡಿದೆ. ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಇದು ಪರಿಹಾರ ಎಂದು ಹೇಳುತ್ತಾರೆ. ಹಿಂದಿನ ಕಾಲದ ಆಯುರ್ವೇದ ಪದ್ಧತಿಯಿಂದ ಹಿಡಿದು ಈಗಿನ ಕಾಲದ ಆಧುನಿಕ ಔಷಧೀಯ ಪದ್ಧತಿಗಳು ಕೂಡ ಅಮೃತಬಳ್ಳಿಗೆ ತಲೆಬಾಗಲೇಬೇಕು.

ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಅಗತ್ಯ ಪ್ರಮಾಣದಲ್ಲಿ ಹೆಚ್ಚಿಸುವ ಗುಣ ಅಮೃತ ಬಳ್ಳಿಯಲ್ಲಿ ಕಂಡು ಬರುತ್ತದೆ. ನೈಸರ್ಗಿಕವಾಗಿ ಇದು ನಮ್ಮ ದೇಹದ ಹಲವು ಪ್ರಕ್ರಿಯೆಗಳನ್ನು ನಿರ್ವಹಣೆ ಕೂಡ ಮಾಡಬಲ್ಲದು.

ಯಾರಿಗೆ ಒಂದು ವೇಳೆ ಅತಿಯಾದ ರೋಗ ನಿರೋಧಕ ವ್ಯವಸ್ಥೆ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡುತ್ತಿರುತ್ತದೆ ಅಂತಹವರಿಗೆ ಅಮೃತಬಳ್ಳಿ ಒಂದು ವರದಾನ ಎಂದು ಹೇಳಬಹುದು.

ಇತ್ತೀಚಿನ ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಕೂಡ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಅಮೃತಬಳ್ಳಿ ತನ್ನದೇ ಆದ ಹೆಸರು ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ. ಅಮೃತ ಬಳ್ಳಿಯಲ್ಲಿ ನಿಮ್ಮ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುವ ಗುಣವಿದೆ.

ಇದು ಆಂಟಿಬಯಾಟಿಕ್ ಮತ್ತು ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳನ್ನು ಸಹ ಒಳಗೊಂಡಿದೆ. ಸಂದರ್ಭದಲ್ಲಿ ಎದುರಾಗುವ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಇದು ರಾಮಬಾಣ. ಉದಾಹರಣೆಗೆ ಶೀತ, ಕೆಮ್ಮು, ನೆಗಡಿ, ಜ್ವರ, ಕೀಲುನೋವುಗಳು, ಆಮ್ಲೀಯತೆ, ಚರ್ಮದ ಅಲರ್ಜಿ, ಮಧುಮೇಹ ಇದ್ದಂತಹ ಜನರು ಸುಲಭವಾಗಿ ಇದನ್ನು ಬಳಕೆ ಮಾಡಬಹುದು.

ಕಳೆದ ಸಾಂಕ್ರಾಮಿಕ ಸಂದರ್ಭದಲ್ಲಿ ಕೂಡ ನಮ್ಮ ಭಾರತ ಸರ್ಕಾರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗುವ ಆಹಾರಗಳ ಪಟ್ಟಿಯಲ್ಲಿ ಅಮೃತಬಳ್ಳಿಗೆ ಕೂಡ ವಿಶೇಷವಾದ ಸ್ಥಾನ ನೀಡಲಾಗಿತ್ತು.

ಆರೋಗ್ಯ ಇಲಾಖೆಯ ಪ್ರಕಾರ ಯಾರು ಕೋವಿಡ್-19 ರೋಗಿಗಳ ಜೊತೆ ಒಡನಾಟ ಇಟ್ಟುಕೊಂಡಿರುತ್ತಾರೆ, ಅಥವಾ ಅವರಿಗೆ ಕೋವಿಡ್-19 ಸೋಂಕು ತಗುಲುವ ಸಾಧ್ಯತೆ ದಟ್ಟವಾಗಿರುತ್ತದೆ, ಅಂತಹವರು ಸುಮಾರು 500 ಮಿಲಿ ಗ್ರಾಂ ಆಗುವಷ್ಟು ಪ್ರಮಾಣಕ್ಕೆ ಒಂದರಿಂದ 3 ಗ್ರಾಂ ಅಮೃತಬಳ್ಳಿಯ ಪುಡಿಯನ್ನು ಸೇರಿಸಿ ದಿನದಲ್ಲಿ ಎರಡು ಬಾರಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು.

ಉಗುರುಬೆಚ್ಚಗಿನ ನೀರಿನಲ್ಲಿ ಸುಮಾರು 15 ದಿನಗಳ ಕಾಲ ಅಥವಾ ಒಂದು ತಿಂಗಳ ಕಾಲ ಇದನ್ನು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜ್ವರ, ಗಂಟಲು ನೋವು, ತಲೆ ನೋವು ಹಾಗೂ ದೈಹಿಕ ಆಯಾಸ ಸುಲಭವಾಗಿ ದೂರವಾಗುತ್ತದೆ.

Discover more from Valmiki Mithra

Subscribe now to keep reading and get access to the full archive.

Continue reading