ಹಾಸನ: ಸರ್ಕಾರದ ತಾರತಮ್ಯ ನೀತಿ ಖಂಡಿಸಿ ಮಾಜಿ ಸಚಿವ ಹೆಚ್.ಡಿ.ರೇವಣ್ಣಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು. ಹೆಚ್.ಡಿ.ರೇವಣ್ಣ ಅವರನ್ನು ಫೋನ್ ಮೇಲೆ ಸಂಪರ್ಕಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಭಟನೆ ಕೈ ಬಿಡುವಂತೆ ಹೇಳಿದರು. ನಂತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಹೆಚ್.ಡಿ.ರೇವಣ್ಣ ಪ್ರತಿಭಟನೆಯಿಂದ ಹಿಂದೆ ಸರಿದರು.
ಪ್ರತಿಭಟನೆ ಕೈ ಬಿಟ್ಟ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿದ್ದ ಕಾಲದಲ್ಲಿ ಹೊಳೆನರಸೀಪುರ ಕಾಲೇಜಿಗೆ ಎರಡು ಸ್ನಾತಕೋತ್ತರ ಕೋರ್ಸ್ ಗೆ ಅನುಮತಿ ಕೊಡಲಾಗಿತ್ತು. ಮೈಸೂರು ವಿವಿಯಿಂದ ಅನುಮತಿ ಕೊಡಲಾಗಿತ್ತು. ಆದ್ರೆ ಉನ್ನತ ಶಿಕ್ಷಣ ಸಚಿವರಾದ ಸಿ.ಎನ್.ಅಶ್ವಥ್ ನಾರಾಯಣ್ ಇದನ್ನ ರದ್ದು ಮಾಡಿದ್ದಾರೆ. ನಮಗೆ ಕೊಟ್ಟ ಎಲ್ಲಾ ಅನುದಾನ ಬಿಜೆಪಿ ಸರ್ಕಾರ ತಡೆ ಹಿಡಿದಿದೆ ಎಂದು ರೇವಣ್ಣ ಆರೋಪಿಸಿದರು.
ಕಾಮಗಾರಿಗಳು ನಿಂತುಕೊಳ್ಳಲಿ. ಆದ್ರೆ ಬಡವರು ಓದೋ ಕಾಲೇಜು ಯಾಕೆ ನಿಲ್ಲಿಸಬೇಕು. ಸರ್ಕಾರ ಮೂಲಭೂತ ಸೌಕರ್ಯಗಳ ಕೊಡದೇ ಹೋದ್ರು ನಾವು ಕಾಲೇಜುಗಳ ಅಭಿವೃದ್ಧಿ ಮಾಡಿದ್ದೇವೆ. ಬಡವರ ಮಕ್ಕಳು ಓದೋ ಕಾಲೇಜಿಗೆ ಯಾಕೆ ರಾಜಕೀಯ ಮಾಡಬೇಕು ಎಂದು ಆಕ್ರೋಶ ಹೊರ ಹಾಕಿದರು.