ಗರ್ಭಧಾರಣೆ ಸಂದರ್ಭದಲ್ಲಿ ದಾಳಿಂಬೆ ಮತ್ತು ದಾಳಿಂಬೆ ಜ್ಯೂಸ್ ಸೇವಿಸಬಹುದೇ?: ಇಲ್ಲಿದೆ ಉತ್ತರ

ಪ್ರತಿಯೊಂದು ಹಣ್ಣುಗಳು ಕೂಡ ಮನುಷ್ಯನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವುದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಎಲ್ಲಾ ಹಣ್ಣುಗಳಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು, ಇದು ದೇಹಾರೋಗ್ಯವನ್ನು ಕಾಪಾಡುವುದು.

ಆದರೆ ಗರ್ಭಧಾರಣೆ ಸಂದರ್ಭದಲ್ಲಿ ಮಹಿಳೆಯರು ತಾವು ಸೇವಿಸುವ ಹಣ್ಣುಗಳ ಬಗ್ಗೆ ಸ್ವಲ್ಪ ಮಟ್ಟಿಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಕೆಲವೊಂದು ಹಣ್ಣುಗಳು ಗರ್ಭಿಣಿಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು.

ಇನ್ನು ಕೆಲವು ತಾಯಿ ಹಾಗೂ ಮಗುವಿಗೆ ಹಲವಾರು ರೀತಿಯ ಪೋಷಕಾಂಶಗಳನ್ನು ನೀಡುವುದು. ನಾವಿಲ್ಲಿ ನಿಮಗೆ ಗರ್ಭಧಾರಣೆ ಸಂದರ್ಭದಲ್ಲಿ ದಾಳಿಂಬೆ ಹಣ್ಣು ಸೇವನೆ ಮಾಡಬಹುದೇ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ದಾಳಿಂಬೆ ಹಣ್ಣು ಎನ್ನುವುದು ಪೋಷಕಾಂಶಗಳಿಂದ ತುಂಬಿ ಹೋಗಿದೆ. ಇದರಲ್ಲಿ ಪೊಟಾಶಿಯಂ, ವಿಟಮಿನ್ ಗಳು, ಕಬ್ಬಿಣಾಂಶ, ಫಾಲಿಕ್ ಆಮ್ಲ ಮತ್ತು ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ.

ದಾಳಿಂಬೆ ಜ್ಯೂಸ್ ಗರ್ಭದಾರಣೆ ಸಂದರ್ಭದಲ್ಲಿ ಕಂಡುಬರುವ ಕೆಲವೊಂದು ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಆದರೆ ಇದನ್ನು ಅತಿಯಾಗಿ ಸೇವನೆ ಮಾಡಬಾರದು. ಇದರಿಂದ ವ್ಯತಿರಿಕ್ತ ಪರಿಣಾಮವಾಗಬಹುದು.

ವಯಸ್ಕರು ದಿನದಲ್ಲಿ ಎರಡರಿಂದ ಎಂಟು ಔನ್ಸ್ ನಷ್ಟು ದಾಳಿಂಬೆ ಜ್ಯೂಸ್ ಕುಡಿಯಬಹುದು. ಆದರೆ ಗರ್ಭಿಣಿಯರಿಗೆ ಯಾವುದೇ ಮಿತಿ ನಿಗದಿ ಮಾಡಿಲ್ಲ. ಗರ್ಭಿಣಿಯರು ಬೇರೆಯವರಿಗೆ ಸೂಚಿಸಿ ರುವುದಕ್ಕಿಂತಲೂ ಕಡಿಮೆ ಸೇವನೆ ಮಾಡಿದರೆ ಒಳ್ಳೆಯದು.

ಗರ್ಭಧಾರಣೆ ಸಂದರ್ಭದಲ್ಲಿ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಸಿಗುವ ಲಾಭಗಳು

ಗರ್ಭಧಾರಣೆ ಸಂದರ್ಭದಲ್ಲಿ ಕೆಲವು ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆಯು ಕಾಡುವುದು. ಇದರಿಂದಾಗಿ ಗರ್ಭದಲ್ಲೇ ಮಗುವಿನ ಸಾವು ಅಥವಾ ಹೆರಿಗೆ ವೇಳೆ ಸಾವು ಸಂಭವಿಸುವ ಸಾಧ್ಯತೆಯು ಇದೆ.

ದಾಳಿಂಬೆ ಜ್ಯೂಸ್ ಕುಡಿದರೆ ಅದರಲ್ಲಿ ಇರುವಂತಹ ಪಾಲಿಫೆನಾಲ್ ಅಂಶವು ರಕ್ತದೊತ್ತಡ ಕಡಿಮೆ ಮಾಡುವುದು.

ದಾಳಿಂಬೆಯಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಂಶವು ಕೊಲೆಸ್ಟ್ರಾಲ್ ತಗ್ಗಿಸುವುದು ಮತ್ತು ಹೃದಯದ ಕಾಯಿಲೆಯನ್ನು ತಡೆಯುವುದು. ಇದರಿಂದ ಹೃದಯದ ಆರೋಗ್ಯವನ್ನು ಇದು ಕಾಪಾಡುವುದು.

ದಾಳಿಂಬೆ ಜ್ಯೂಸ್ ನಲ್ಲಿ ಇರುವಂತಹ ಪಾಲಿಫೆನಾಲ್ ಅಂಶ ಮತ್ತು ಉರಿಯೂತ ಶಮನಕಾರಿ ಅಂಶವು ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವುದು.

ಗರ್ಭಧಾರಣೆ ಸಂದರ್ಭದಲ್ಲಿ ದಾಳಿಂಬೆ ಜ್ಯೂಸ್ ಕುಡಿದರೆ ಅದು ಮಗುವಿನ ಮೆದುಳಿಗೆ ಆಗುವಂತಹ ಹಾನಿ ತಪ್ಪಿಸುವುದು.

ಗರ್ಭಿಣಿಯರು ದಾಳಿಂಬೆ ಜ್ಯೂಸ್ ಕುಡಿದರೆ ಅದು ಮೂಳೆಯ ಕ್ಯಾಲ್ಸಿಯಂನ್ನು ಹೆಚ್ಚಿಸುವುದು. ನಿಯಮಿತವಾಗಿ ಇದರ ಸೇವನೆ ಮಾಡಿದರೆ ಅದರಿಂದ ಮೂಳೆಗೆ ಆಗುವ ಹಾನಿ ತಡೆಯಬಹುದು ಮತ್ತು ಮೂಳೆಯು ಬಲಗೊಳ್ಳುವುದು.

ಗರ್ಭಧಾರಣೆ ಸಂದರ್ಭದಲ್ಲಿ ಕಾಡುವ ಕೆಲವು ಸಮಸ್ಯೆಯಿಂದಾಗಿ ಅಕಾಲಿಕ ಹೆರಿಗೆ ಮತ್ತು ಮಗುವಿನ ತೂಕವು ಕಡಿಮೆ ಇರುವ ಸಮಸ್ಯೆಯು ಕಾಡುವುದು.

ಇದೆಲ್ಲವೂ ಆಕ್ಸಿಡೇಟಿವ್ ಒತ್ತಡದಿಂದ ಬರುವುದು. ದಾಳಿಂಬೆ ಜ್ಯೂಸ್ ನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಂಶವು ತುಂಬಾ ಪರಿಣಾಮಕಾರಿ ಆಗಿ ಈ ಸಮಸ್ಯೆಗಳನ್ನು ನಿವಾರಣೆ ಮಾಡುವುದು.

ದಾಳಿಂಬೆಯಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಅಂಶವು ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು ಮತ್ತು ಸೋಂಕಿನ ವಿರುದ್ಧ ಹೋರಾಡುವುದು. ಇದರಿಂದ ದಾಳಿಂಬೆ ಜ್ಯೂಸ್ ಗರ್ಭಿಣಿಯರಿಗೆ ಒಳ್ಳೆಯದು.

ಈ ಅಂಶಗಳು ನೆನಪಿರಲಿ

  • ಯಾವಾಗಲೂ ತಾಜಾ ಮತ್ತು ಹಣ್ಣಾದ ದಾಳಿಂಬೆ ಸೇವಿಸಿ. ಸಿಪ್ಪೆಯು ಗಟ್ಟಿಯಾಗಿರುವುದನ್ನು ಆಯ್ಕೆ ಮಾಡಿ.
  • ಕೇವಲ ಅದರ ಬೀಜಗಳನ್ನು ಮಾತ್ರ ಜ್ಯೂಸ್ ಮಾಡಲು ಬಳಸಿಕೊಳ್ಳಿ.
  • ಹೊರಗಡೆ ಪ್ಯಾಕ್ ಮಾಡಲ್ಪಟ್ಟ ಜ್ಯೂಸ್ ಗೆ ಸಂರಕ್ಷಕಗಳನ್ನು ಹಾಕಿರುವರು. ಮನೆಯಲ್ಲೇ ತಾಜಾ ಜ್ಯೂಸ್ ತಯಾರಿಸಿ.
  • ಗರ್ಭಧಾರಣೆ ಸಂದರ್ಭದಲ್ಲಿ ದಾಳಿಂಬೆ ಮತ್ತು ಅದರ ಜ್ಯೂಸ್ ತುಂಬಾ ಲಾಭಕಾರಿ. ಆದರೆ ಇದನ್ನು ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡಿದರೆ ಒಳ್ಳೆಯದು. ಗರ್ಭಿಣಿಯರು ತಮ್ಮ ನಿತ್ಯದ ಆಹಾರ ಕ್ರಮದಲ್ಲಿ ಇದನ್ನು ಬಳಸಬಹುದು.

Discover more from Valmiki Mithra

Subscribe now to keep reading and get access to the full archive.

Continue reading