ಬಳ್ಳಾರಿ: ಜಿಲ್ಲಾ ತೋಟಗಾರಿಕೆ ಬೆಳೆಗಾರರ ಸಹಕಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಂಘ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಎನ್ .ಸುವರ್ಣಮ್ಮ ಗಂಡ ನೆನೆಕೆ ವಿರುಪಾಕ್ಷಪ್ಪಗೆ 16 ಜನ ಸದಸ್ಯರಲ್ಲಿ 15 ಮತಗಳಿಂದ ಅಧ್ಯಕ್ಷರಾಗಿ ಸುವರ್ಣಮ್ಮ ಆಯ್ಕೆಯಾಗಿರುತ್ತಾರೆ.
16 ಜನ ಸದಸ್ಯರಲ್ಲಿ 14 ಮತಗಳಿಂದ ಹಾಗಲೂರು ಮಲ್ಲನಗೌಡ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೂ ಮತ್ತು ಉಪಾಧ್ಯಕ್ಷರಿಗೆ ಶುಭಾಶಯ ಕೋರಲಾಗಿದೆ.