ಚಿಕ್ಕಮಗಳೂರು: ಜಿಲ್ಲೆಯ ಸಂಘದ ಕಛೇರಿಯಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ ಮತ್ತು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘ ಸಹಯೋಗದೊಂದಿಗೆ ಎರಡು ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಜಿಲ್ಲಾಧ್ಯಕ್ಷರು ಜಗದೀಶ್ ಕೋಟೆ ಮಾತನಾಡಿ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ ಸದಾಕಾಲವೂ ಸಂಘಟನೆಯಲ್ಲಿ ಚಟುವಟಿಕೆ ಇಂದ ಸಮಾಜದ ಪರ ಕೆಲಸ ಮಾಡತ್ತಾ ಇದೆ ಮತ್ತು ನಮ್ಮ ವಾಲ್ಮೀಕಿ ನಾಯಕ ಸಮಾಜಕ್ಕೆ ಸರ್ಕಾರ 7.5% ಮೀಸಲಾತಿ ನೀಡಬೇಕು ಎಂದು ಒತ್ತಾಯಪಡಿಸಿದರು.
ಚಿಕ್ಕಮಗಳೂರು ನಗರದ ನಗರಸಭೆಯ 7ನೇ ವಾರ್ಡ್ ಗೆ ನೂತನವಾಗಿ ಸದಸ್ಯರರಾಗಿ ಆಯ್ಕೆಯಾಗಿರುವ ದೋಣಿಖಣದ ಕುಮಾರ ರವರಿಗೆ ಅಭಿನಂದನೆ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು ಪುಷ್ಪವತಿ ಚಂದ್ರಶೇಖರ ನಾಯಕ ಮಾತನಾಡಿ ನಮ್ಮ ಸಮಾಜದ ಮತ್ತು ಪರಿಶಿಷ್ಟ ಪಂಗಡಗಳ ನೌಕರರು ಸಂಘ ಮತ್ತು ಸಂಘಟನೆಯ ಬಗ್ಗೆ ಆಸಕ್ತಿವಹಿಸಬೇಕು. ಸಮಾಜದ ಪರ ಕೆಲಸ ಮಾಡಬೇಕು ಎಂದು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಮಾಜದ ಪರ ನಾನು ಕೆಲಸ ಮಾಡಲು ತಮ್ಮ ಸಲಹೆ ಸಹಕಾರ ಅತ್ಯವಶ್ಯಕ ಎಂದು ಹೇಳಿದರು.
ನೂತನವಾಗಿ ನಗರಸಭೆಯ ಸದ್ಯಸರು ದೋಣಿಖಣ ಕುಮಾರ ಮಾತನಾಡಿ, ಸಮಾಜದ ಪರ ಕೆಲಸ ಮಾಡಲು ನಾನು ಸದಾಕಾಲವೂ ಸಿದ್ದ ಇದ್ದನೆ ಸಂಘದವರು ಮತ್ತು ಸಮಾಜದ ಬಂಧುಗಳು ಮುಕ್ತವಾಗಿ ತಮ್ಮ ಸಮಸ್ಯೆ ಗಳನ್ನು ಚರ್ಚೆ ಮಾಡಬಹುದು ಎಂದರು.
ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷರು ಪ್ರದೀಪ್ ಮಾತನಾಡಿ, ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ ಸದಾಕಾಲವೂ ವಿಭಿನ್ನ ರೀತಿಯಲ್ಲಿ ಸಂಘಟನೆ ಮತ್ತು ಸಮಾಜದ ಬಂಧುಗಳ ಸಮಸ್ಯೆ ಗೆ ನಾಯ್ಯವಾದ ರೀತಿಯಲ್ಲಿ ಸ್ಪಂದಿಸುವ ಕೆಲಸ ಮಾಡುತ್ತ ಇದೆ ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘದ ಜಿಲ್ಲಾಧ್ಯಕ್ಷರು ಜಗದೀಶ್ ಕೋಟೆ ,ಗೌರವ ಅಧ್ಯಕ್ಷರು ಜಗದೀಶ್ ಪ್ರಸಾದ್ ಪ್ರಧಾನ ಕಾರ್ಯದರ್ಶಿ ಮಧುಕುಮಾರ ತಾಲ್ಲೂಕು ಅಧ್ಯಕ್ಷರು ಪ್ರದೀಪ್ ತಾಲ್ಲೂಕು ಉಪಾಧ್ಯಕ್ಷ ಶ್ರೀಧರ .ತಾಲ್ಲೂಕು ಗೌರವ ಅಧ್ಯಕ್ಷರು ವಿಜಯಕುಮಾರ ಅನೀಲ್ ಚೌದರಿ ನಾಯಕ. ರಂಗಣ್ಣ .ವೀರಪ್ಪ ಭರತ ಪಾಳೆಗಾರ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಜಿಲ್ಲಾಧ್ಯಕ್ಷರು ಪುಷ್ಪವತಿ ಚಂದ್ರಶೇಖರ ನಾಯಕ ಪ್ರದಾನ ಕಾರ್ಯದರ್ಶಿ ಲೋಹಿತ ಕುಮಾರ .ಗೌರವ ಅಧ್ಯಕ್ಷರು ಬಿ.ಟಿ. ಕುಮಾರನಾಯಕ . ಜಿಲ್ಲಾ ಉಪಾಧ್ಯಕ್ಷ ಬಿ.ಟಿ ಲಕ್ಷಣ್ ಸಂಘಟನೆ ಕಾರ್ಯದರ್ಶಿ ಶಾರದ ನಾಯಕ ಮತ್ತು ಕಾರ್ಯದರ್ಶಿ ಲೋಹಿತ್ ದೋಣಿಖಣ ರವರು ಮತ್ತು ಸಂಘದ ಪದಾಧಿಕಾರಿಗಳು ಮತ್ತು ಸಮಾಜದ ಬಂಧುಗಳು ಹಾಜರಿದ್ದರು.