ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಗುಳೂರು ಹೋಬಳಿ ಕೇಂದ್ರದಲ್ಲಿ ಸರ್ಕಾರದಿಂದ ಪಡಿತರ ಚೀಟಿ ಸೇರಿದಂತೆ ಜಾತಿ ಆದಾಯ, ಪ್ರಮಾಣ ಪತ್ರ, ಹಾಗೂ ಕಂದಾಯ ಇಲಾಖೆಯ ದಾಖಲೆ ಪತ್ರಗಳನ್ನು ಸಕಾಲಕ್ಕೆ ಪಡೆಯಲು ಸಾಧ್ಯವಾಗದೆ ನಾಡ ಕಛೇರಿಯ ಸುತ್ತಾ ಪ್ರತಿದಿನ ವಯೋವೃದ್ದರು, ಮಹಿಳೆಯರು,ಅಂಗವಿಕಲರು ನಾಡ ಕಛೇರಿಯ ಸುತ್ತಲೂ ಅಲೆದಾಡುವ ಪರಿಸ್ಥಿತಿ ಉದ್ಭವಿಸಿದೆ.
ಒಂದು ದಿನದಲ್ಲಿ ಸಿಗುವ ದಾಖಲೆಗಳನ್ನು ಪದೇ ಪದೇ, ಜನ ಸಾಮಾನ್ಯರು ಸಾಲು, ಸಾಲಾಗಿ ಸರಣಿಯಲ್ಲಿ ನಿಂತು ಕಾದು ಸುಸ್ತಾಗುತ್ತಿದ್ದಾರೆ. ಈ ಹೋಬಳಿ ನಮ್ಮ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್ .ಎನ್. ಸುಬ್ಬಾರೆಡ್ಡಿಯ ತವರೂರಲ್ಲೇ ಜನ ಸಾಮಾನ್ಯರಿಗೆ ಸೂಕ್ತ ಪರಿಹಾರ ಸಿಗದೆ ಸಮಸ್ಯೆಗಳು ಹೆಚ್ಚಾಗುತ್ತಿವೆ.
ಇಷ್ಟೆಲ್ಲಾ ಅವಾಂತರಕ್ಕೆ ಕಂಪ್ಯೂಟರ್ ಆಫ್ ರೈಟರ್ ಮತ್ತಿತರೆ ಅಧಿಕಾರಿಗಳು ನಾಡ ಕಛೇರಿಗೆ ನಿಗದಿತ ಸಕಾಲಕ್ಕೆ ಬರದೇ ಇರುವುದೇ ಸಮಸ್ಯೆಗಳು ಗಂಭೀರವಾಗಲು ಕಾರಣ ಬಡ ಜನರು ಬೇಕಾದ ಕಛೇರಿಯ ಸುತ್ತಾ ಬೇಲಿ ಪೋದಗೆಳು, ಗಿಡ ಗಂಟೆಗಳು ಆವರಿಸಿವೆ.
ರಾಜ್ಯ ಸಕಾ೯ರ ಅನೇಕ ಕಾಯ೯ಕ್ರಮಗಳನ್ನು ಜಾರಿಗೆತರುತ್ತಿದ್ದು ಸೌಲಭ್ಯ ಗಳನ್ನು ಪಡೆಯಲು ಅರ ಸಾಹಸ ಮಾಡುವಂತ್ತಾಗಿದೆ. ಅದ್ದರಿಂದ ಇನ್ನಾದರೂ ಅಧಿಕಾರಿಗಳು ಮತ್ತು ಶಾಸಕರು ಈ ಬಗ್ಗೆ ಕೂಡಲೇ ಬಗೆಹರಿಸಲು ಮಾಧ್ಯಮದ ಮೊರೆ ಹೋಗಿದ್ದಾರೆ.