ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮದನವಾಡಿ ಎಂಬ ಗ್ರಾಮದ ಬಡಕುಟುಂಬದಲ್ಲಿ ಹುಟ್ಟಿದ ಶಿವಾಜಿ ಶೀತಳಗೇರ್ ಅವರು ದೇಶಕ್ಕೆ ಸೈನಿಕನಾಗಿ ಸೇವೆ ಸಲ್ಲಿಸಿ ನಿವೃತ್ತಿ ನಂತರ ವಾಲ್ಮೀಕಿ ನಾಯಕ ಸಮಾಜಕ್ಕೆ ಆಗುತ್ತಿರುವ ಅನೇಕ ಅನ್ಯಾಯಗಳ ವಿರುದ್ಧ ಮತ್ತು ವಿಶೇಷವಾಗಿ ನಕಲಿ ಜಾತಿ ಪ್ರಮಾಣ ಪತ್ರ ಗಳು ಪಡೆದವರ ವಿರುದ್ಧ ಬೀದರ್ ಜಿಲ್ಲೆಯ ಭಾಗದಲ್ಲಿ ನಿರಂತರ ಹೋರಾಟ ಮಾಡಿ ಅವರ ಜೀವನವನ್ನು ಸಮಾಜಕ್ಕಾಗಿ ದೇಶಕ್ಕಾಗಿ ಮುಡುಪಾಗಿಟ್ಟಿದ್ದರು ಹೈದ್ರಾಬಾದ್ ಕರ್ನಾಟಕ ಪ್ರದೇಶದ ನಾಯಕರುಗಳೊಂದಿಗೆ ದಶಕಗಳಿಂದ ನಮ್ಮೊಂದಿಗೆ ಇದ್ದು ಹೋರಾಟ ಮಾಡಿದ ನೆನಪುಗಳು ಸಮಾಜ ಹೇಗೆಮರೆಯುತ್ತದೆ ನಮ್ಮೊಂದಿಗೆ ನನ್ನ ಆತ್ಮೀಯ ಹೋರಾಟಗಾರ ಶಿವಾಜಿ ಶೀತಳಗೇರ ಅವರು ಕಳೆದ ಏಪ್ರಿಲ್ ತಿಂಗಳಲ್ಲಿ ಕೊರನ ಮಹಾಮಾರಿ ರೋಗಕ್ಕೆ ಮೃತಪಟ್ಟಿರುವ ಕಾರಣ ಅವರ ಅಂತ್ಯಸಂಸ್ಕಾರದಲ್ಲಿ ಸಮಾಜದ ಮುಖಂಡರು ಭಾಗವಹಿಸಲು ವಗಿರಲಿಲ್ಲ. ಆದ್ದರಿಂದ ಇಂದು ಕಲ್ಯಾಣ ಕರ್ನಾಟಕ ಭಾಗದ ವಾಲ್ಮೀಕಿ ನಾಯಕ ಸಮಾಜದ ಹೋರಾಟಗಾರರು ಮತ್ತು ಸಮಾಜದ ಹಿರಿಯ ಮುಖಂಡರುಗಳೊಂದಿಗೆ ಅವರ ಗ್ರಾಮಕ್ಕೆ ಹೋಗಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಶಿವಾಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದರ ಮುಖಾಂತರ ಗೌರವ ನೀಡಲಾಯಿತು. ಸಮಾಜದ ಹೋರಾಟಗಾರರು ಮತ್ತು ಮುಖಂಡರು ಸೇರಿ ಅವರ ಕುಟುಂಬಕ್ಕೆ 45000 ರೂಪಾಯಿಗಳುನು ಸಮಾಜದ ವತಿಯಿಂದ ನೀಡಲಾಯಿತು. ಈ ಭಾಗದ ಹೋರಾಟಗಾರರು ಸಮಾಜದ ಮುಖಂಡರು ಯಾವ ಒಬ್ಬ ರಾಜಕಾರಣಿಗಳನ್ನು ನಿರೀಕ್ಷೆ ಮಾಡದೆ ತಮ್ಮ ಕೆಲಸವನ್ನು ಮಾಡಿ ಹೋರಾಟಗಾರನಿಗೆ ಗೌರವವನ್ನು ಸಲ್ಲಿಸಿದ್ದಾರೆ. ಶಿವಾಜಿ ಅಂತ ಹೋರಾಟಗಾರನನ್ನು ಕಳೆದುಕೊಂಡ ನಮ್ಮ ಸಮಾಜಕ್ಕೆ ಬಹುದೊಡ್ಡನಷ್ಟವಾಗಿದೆ ಇಂದು ಅವರ ಸ್ವಗ್ರಾಮಕ್ಕೆ ಹೋಗಿ ಅವರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಮುಖಾಂತರ ಅವರ ಕುಟುಂಬಕ್ಕೆ ಧೈರ್ಯ ತುಂಬಿದ ಸಮಾಜದ ಹಿರಿಯರಾದ ದೇವೇಂದ್ರಪ್ಪ ಗೌಡ ಗೌಡಗೇರಾ, ಯಾದಗಿರಿ ಜಿಲ್ಲಾ ಅಧ್ಯಕ್ಷರು ಮಾರೆಪ್ಪ ನಾಯಕ ಮಗದಂಪೂರ್, ರಾಯಚೂರಿನ ರಘುವೀರ ನಾಯಕ, ಗೌಡಪ್ಪಗೌಡ ಆಲ್ದಾಳ, ಭೀಮರಾಯನ ಠಾಣಗುಂದಿ, ಶ್ರಾವಣ ಕುಮಾರ ನಾಯಕ್ ಜೇವರ್ಗಿ, ಮಾರಪ್ಪ ಪ್ಯಾಟಿ ಶಹಪುರ್ ,ಶರಣಪ್ಪ ಜಕನಹಳ್ಳಿ ,ಯಂಕಣ್ಣ ಕೆಇಬಿ ಗುತ್ತಿಗೆದಾರರು, ಹಣಮಂತರಾಯ ದೊರೆ ಟೂಕಾಪುರ್, ಭೀಮಣ್ಣ ಮಾಸ್ಟರ್, ನಂದಕುಮಾರ್ ಮುಡಬೂಳ ನೂತನ ಬೀದರ್ ಜಿಲ್ಲಾಧ್ಯಕ್ಷ ದಶರಥ ನಾಯಕ್, ಭೀಮಶಪ್ಪ ಶಿಕ್ಷಕರು, ಯಲ್ಲಾಲಿಂಗ ಭೋಸ್ಲೆ ,ರಮೇಶ್ ಮದಕರಿ, ಜನಾರ್ದನ್ ಚಿಂಚೋಳಿ, ಇನ್ನೂ ಅನೇಕ ನೂರಾರು ಸಮಾಜದ ಮುಖಂಡರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿವಾಜಿ ಅವರ ಕುಟುಂಬಕ್ಕೆ ಸಾಂತ್ವನವನ್ನು ತಿಳಿಸಲಾಯಿತು.**** ಎಲ್ಲರಿಗೂ ಧನ್ಯವಾದಗಳು ಅರ್ಪಿಸುವವರು ***. ಮಾರೆಪ್ಪ ನಾಯಕ ಮಗದಂಪೂರ್