ವಾಲ್ಮೀಕಿ ಜಾತ್ರೆ ಮುಂದೂಡಿಕೆ ರಾಜನಹಳ್ಳಿ ಶ್ರೀಗೆ ಡಿಸಿ ಮನವಿ

ರಾಜನಹಳ್ಳಿ:  ವಾಲ್ಮೀಕಿ ಗುರುಪೀಠಕ್ಕೆ ಭಾನುವಾರ ಸಂಜೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಲ್ಕನೇ ವರ್ಷದ ವಾಲ್ಮೀಕಿ ಜಾತ್ರೆಯನ್ನು ಮುಂದೂಡುವಂತೆ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರಲ್ಲಿ ಮನವಿ ಮಾಡಿಕೊಂಡರು.

ಈಗಾಗಲೇ ಹರಜಾತ್ರೆ, ತರಳುಬಾಳು ಹುಣ್ಣಿಮೆ ಮತ್ತು ಸಂತ ಸೇವಾಲಾಲ್ ಜಯಂತಿಯನ್ನು ಮುಂದೂಡಲಾಗಿತ್ತು. ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಕಡೆ ಕೊರೊನಾ ಸೋಂಕು ಅತಿವೇಗದಲ್ಲಿ ಹರಡುತ್ತಿರುವುದರಿಂದ ಫೆಬ್ರವರಿ ತಿಂಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಫೆಬ್ರವರಿ 8 ಮತ್ತು 9ರಂದು ಹಮ್ಮಿಕೊಂಡಿರುವ ನಾಲ್ಕನೇ ವರ್ಷದ ವಾಲ್ಮೀಕಿ ಜಾತ್ರೆಯನ್ನು ಮುಂದೂಡಿ ಕೊರೊನ ವಿರುದ್ಧದ ಹೋರಾಟದಲ್ಲಿ ಇಂದಿನಂತೆ ಈಗಲೂ ನಮಗೆ ಬೆಂಬಲ ಕೊಡಿ ಎಂದು ಜಿಲ್ಲಾಧಿಕಾರಿ ಬೀಳಗಿಯವರು ಸ್ವಾಮೀಜಿ ಅವರಿಗೆ ಕೇಳಿದರು.

ವಾಲ್ಮೀಕಿ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಜನ ಭಾಗವಹಿಸುತ್ತಿದ್ದಾರೆ. ಹಾಗಾಗಿ ಜನರ ಆರೋಗ್ಯದ ದೃಷ್ಟಿಯಿಂದ ಮತ್ತು ಸರ್ಕಾರದ ಸೂಚನೆಯಂತೆ ಜಾತ್ರೆಯನ್ನು ಮುಂದೂಡುವ ಬಗ್ಗೆ ಫೆಬ್ರವರಿ ಒಂದರಂದು ಜಾತ್ರಾ ಸಮಿತಿ ಸಭೆ ನಡೆಸಿ ನಿರ್ಧಾರ ಪ್ರಕಟಿಸುವುದಾಗಿ ಸ್ವಾಮೀಜಿಯವರು ಜಿಲ್ಲಾಧಿಕಾರಿಯವರಿಗೆ ತಿಳಿಸಿದರು.

ಇದೇ ವೇಳೆ ಮಠದ ಆವರಣದಲ್ಲಿ ಜೋಡಣೆ ಗೊಳ್ಳುತ್ತಿರುವ ರಿಮೋಟ್ ಕಂಟ್ರೋಲ್ ನ ಆರು ಬೃಹತ್ ಗಾಲಿಗಳನ್ನು ಒಂದಿರುವ ನೂತನ ತೇರನ್ನು ಜಿಲ್ಲಾಧಿಕಾರಿಗಳು ಪರೀಕ್ಷೆ ಮಾಡಿ, ರಾಜ್ಯದಲ್ಲೇ ಅತಿ ದೊಡ್ಡ ತೇರು ಇದಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿರಹಟ್ಟಿ ಮಾಜಿ ಶಾಸಕ ರಾಮಕೃಷ್ಣ ದೊಡ್ನನಿ , ಅರಣ್ಯ ನಿಗಮದ ಮಾಜಿ ಅಧ್ಯಕ್ಷ ಟಿ. ಈಶ್ವರ್, ಮಠದ ಆಡಳಿತಾಧಿಕಾರಿ ಟಿ.ಓ ಬಳಪ್ಪ, ಉಪವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸ ಗೌಡರ್, ದಾವಣಗೆರೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಮಹಾನಗರ ಪಾಲಿಕೆ

Discover more from Valmiki Mithra

Subscribe now to keep reading and get access to the full archive.

Continue reading