ಚಿಕ್ಕಬಳ್ಳಾಪುರ: ಇದ್ದಕ್ಕಿದ್ದಂತೆ ಬಾರಿ ಲಘು ಕಂಪನವನ್ನು ಕೇಳಿದ ಗ್ರಾಮಸ್ಥರು ಕಂಗಲಾದ ಘಟನೆ ಜಿಲ್ಲೆಯ ಗುಡಿಬಂಡೆ ತಾಲೂಕು ಎಲ್ಲೋಡು ಗ್ರಾಮ ಪಂಚಾಯಯಿತಿಗೆ ಸೇರಿದ ಬುಳ್ಳಸಂದ್ರ ಕಂಬಾಲಹಳ್ಳಿಯಲ್ಲಿ ನಡೆದಿದೆ.
ದಿನಾಂಕ 12 ರಂದು ಸಂಜೆ ಸಮಯ 7.30ರಲ್ಲಿ ಕೇಳಿ ಬಂದ ಶಬ್ದದಿಂದ ಗ್ರಾಮಸ್ಥರು ಭಯ ಭೀತರಾಗಿ ಈಡಿ ರಾತ್ರಿಯಲ್ಲಾ ಜನರು ಆತಂಕದಲ್ಲಿ ಕಳೆಯುವವಂತ ಪರಿಸ್ಥಿತಿ ನಿಮಾ೯ಣವಾಗಿತ್ತು. ಇದರಿಂದ ಎರಡು ಗ್ರಾಮಗಳು ಅಕ್ಕ ಪಕ್ಕದಲ್ಲಿದ್ದು ಕೆಲವು ಮನೆಗಳು ನೆರೆಬಿಟ್ಟಿದೆ.
ತಕ್ಷಣವಾಗಿ ಗುಡಿಬಂಡೆ ತಾಲೂಕು ತಹಶೀಲ್ದಾರ್ ಸಿಂಗ್ಬತುಲ್ಲಾ ಎಚ್ಚೇತುಕೊಂಡು ಎರಡು ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಂದ ಸಂಪೂಣ೯ವಾಗಿ ಶಬ್ದಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸಿ ಗ್ರಾಮಸ್ಥರಿಗೆ ಧೈಯ ತುಂಬಿ ನಾವಿದ್ದೇವೆಂದು ಭರವಸೆ ನೀಡಿದರು.
ಘಟನೆಯ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಉಪವಿಭಾಗ ಅಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿದ್ದು ಅದರಂತೆ ಇಂದು ಘಟನೆಯ ಸ್ಥಳಕ್ಕೆ ಉಪವಿಭಾಗ ಅಧಿಕಾರಿ ಗುಡಿಬಂಡೆ ತಾಲೂಕು ತಹಶೀಲ್ದಾರ್ ಸಿಂಗ್ಬತುಲ್ಲಾ ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿ ಇದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ನೀಡುವಂತೆ ಗಣಿಮತ್ತು ಭೂವಿಜ್ಞಾನ ಅಧಿಕಾರಿಗಳಿಗೆ ಸೂಚಿಸಿದರು.