ಅಂತರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಆಯ್ಕೆಯಾದ ವಾಲ್ಮೀಕಿ ಸಮಾಜದ ರೈತನ ಮಗ ರಕ್ಷಿತ್ ನಾಯಕ..!

ಚನ್ನಗಿರಿ: ಇತ್ತಿಚೆಗೆ ಉತ್ತರ ಪ್ರದೇಶದ ಆಗ್ರಾದಲ್ಲಿ ‘ಸ್ಟೂಡೆಂಟ್ಸ್ ಆಲ್ ಗೇಮ್ಸ್ ಆಕ್ಟಿವಿಟೀಸ್ ಅಂಡ್ ಡೆವೆಲಪ್ ಮೆಂಟ್  ಫೊಂಡೆಷನ್’ ವತಿಯಿಂದ ನಡೆದ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ 22 ವರ್ಷ ಒಳಗಿನವರ ವಿಭಾಗದಲ್ಲಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ದಾಗಿನಕಟ್ಟೆ ಗ್ರಾಮದ ಪಿ. ಆರ್. ರಕ್ಷಿತ್ ಕರ್ನಾಟಕ ತಂಡದಿಂದ ಪ್ರತಿನಿಧಿಸಿ ಚಿನ್ನ ಗೆಲ್ಲುವ ಮೂಲಕ ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ದಾಗಿನಕಟ್ಟೆ ಗ್ರಾಮದ ಪಿ. ರವಿ  ಹಾಗೂ ಗೌರಮ್ಮ ದಂಪತಿಗಳ ಮಗನಾಗಿರುವ ರಕ್ಷಿತ್ ಶಾಲಾ ದಿನಗಳಿಂದಲೂ ಕಬಡ್ಡಿ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಬಡತನದ ನಡುವೆಯು ಸತತ ಪರಿಶ್ರಮದಿಂದ ಸಾಧನೆಯ ಮೆಟ್ಟಿಲೇರಿ  ಹೆತ್ತವರಿಗೆ ಹಾಗೂ ಹುಟ್ಟಿದ ಊರಿಗೆ ಕೀರ್ತಿ ತಂದಿದ್ದಾರೆ.

ರೈತನ ಮಗ ತನ್ನ ಸತತ ಪರಿಶ್ರಮದಿಂದ ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಕ್ಕೆ ಆಯ್ಕೆಯಾಗಿರುವುದು ನೀಜಕ್ಕೊ  ಹೆಮ್ಮೆ ಪಡುವ ವಿಚಾರವಾಗಿದೆ. ಹಾಗೂ ಕ್ರೀಡಾ ಆಸಕ್ತಿ ಇರುವ ಬಡ ಮಕ್ಕಳಿಗೆ ಈ ಸಾಧನೆ ಸ್ಪೂರ್ತಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಬಸವಾಪುರ ರಂಗನಾಥ ನಾಯಕ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

ರಕ್ಷಿತ್ ರವರು ದಾಗಿನಕಟ್ಟೆ ಗ್ರಾಮದ ಶ್ರೀ ವಾಲ್ಮೀಕಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ ಕೆಂಗಾಪುರ ಶ್ರೀ ರಾಮಲಿಂಗೇಶ್ವರ ಕಾಲೇಜ್ ನಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿ ಬಸವಾಪಟ್ಟಣದಲ್ಲಿ ಪದವಿ ಶಿಕ್ಷಣ ಪಡೆಯುತ್ತ ಬಿಡುವಿನ ವೇಳೆಯಲ್ಲಿ ತಂದೆಯೊಂದಿಗೆ ರೈತಾಪಿ ಕೆಲಸಗಳಲ್ಲಿ ಭಾಗಿಯಾಗುವ ಜೋತೆಗೆ ಕಬಡ್ಡಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಬೆಂಗಳೂರಿನ ಸಮೀಪದ ಹೊಸಕೋಟೆಯಲ್ಲಿ ಕರ್ನಾಟಕ ರಾಜ್ಯ ಕಬಡ್ಡಿ ಫೆಡರೇಷನ್ ವತಿಯಿಂದ ನಡೆದ ತರಬೇತಿಯಲ್ಲಿ ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದ ತಂಡಕ್ಕೆ ಆಯ್ಕೆಯಾಗಿ ಉತ್ತರ ಪ್ರದೇಶದ ಅಗ್ರಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯದಲ್ಲಿ ಹಲವು ರಾಜ್ಯಗಳ ಕಬಡ್ಡಿ ತಂಡಗಳನ್ನ ಮಣಿಸಿ ಕರ್ನಾಟಕ ತಂಡದಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಸಿದ್ಧತೆ ನಡೆಸುತಿದ್ದಾರೆ.

ಹೆಚ್ಚಿನ ತರಬೇತಿ ಪ್ರವಾಸ ಇನ್ನಿತರೆ ಕ್ರೀಡಾ ಖರ್ಚು ವೆಚ್ಚಕ್ಕೆ  ಹಣ ಭರಿಸುವ ಶಕ್ತಿ ಬಡ ರೈತ ಕುಟುಂಬಕ್ಕೆ ಇಲ್ಲ  ಜನಪ್ರತಿನಿಧಿಗಳು. ಸಂಘಸಂಸ್ಥೆಗಳು. ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆ ಅಗತ್ಯ ನೆರವು ನೀಡಿ ಬಡ ಕ್ರೀಡಾಪಟುವನ್ನು ಪ್ರೋತ್ಸಾಹಿಸಬೇಕಿದೆ.

ಪಿ.ಆರ್.ರಕ್ಷಿತ್ ದಾಗಿನಕಟ್ಟೆ

ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಮೊಬೈಲ್ ಸಂಖ್ಯೆ –  9535346015

Discover more from Valmiki Mithra

Subscribe now to keep reading and get access to the full archive.

Continue reading