ಹೈದರಾಬಾದ್: ನಟಿ ಸಮಂತಾ ಜತೆಗಿನ ವೈವಾಹಿಕ ಡಿವೋರ್ಸ್ ಕುರಿತು ನಟ ನಾಗಚೈತನ್ಯ ಮಾತನಾಡಿದ್ದಾರೆ. ವಿಚ್ಛೇದನದ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಾಗಚೈತನ್ಯ ಸದ್ಯ ಬಂಗರ್ರಾಜು ಸಿನಿಮಾದ ಪ್ರೊಮೋಷನ್ ನಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆ ನಟ ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ನಾಗಚೈತನ್ಯ ಜೊತೆ ಮಾಧ್ಯಮ ಮಿತ್ರರು ವಿಚ್ಚೇಧನದ ಕುರಿತು ಪ್ರಶ್ನೆ ಕೇಳಿದ್ದಾರೆ. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಾಗಚೈತನ್ಯ, ನಾವಿಬ್ಬರು ಬೇರ್ಪಟ್ಟಿರುವುದು ಒಂದೊಳ್ಳೆಯ ನಿರ್ಧಾರವಾಗಿದೆ.
ವೈಯಕ್ತಿಕ ನಿರ್ಧಾರಕ್ಕಾಗಿ ನಾವಿಬ್ಬರು ಪರಸ್ಪರವಾಗಿ ನಿರ್ಧಾರ ತೆಗೆದುಕೊಂಡಿದ್ದೇವೆ. ಅವಳು ಸಂತೋಷವಾಗಿದ್ದರೆ ನನಗೂ ಅದೇ ಸಂತೋಷ. ವೈಯಕ್ತಿಕವಾಗಿ ಸಂತೋಷವಾಗಿರುವ ವಿಚಾರ ಬಂದಂತಹ ಪರಿಸ್ಥಿತಿಯಲ್ಲಿ ಡಿವೋರ್ಸ್ ಆಗುವುದು ಒಳ್ಳೆಯ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.