ಮನೆ ಮದ್ದು : ಹಲ್ಲು ನೋವು ಸಮಸ್ಯೆಗೆ ಶಾಶ್ವತವಾದ ಪರಿಹಾರ..!

ಹಲ್ಲಿನ ಸ್ವಚ್ಛತೆ ಬಗ್ಗೆ ಹೆಚ್ಚು ಗಮನಹರಿಸದೆ ಇದ್ದಾಗ ಹಲ್ಲು ಹುಳುಕಾಗುತ್ತದೆ. ಹೀಗಾಗಿ ಊಟ ಮಾಡಿದ ನಂತರ ಚೆನ್ನಾಗಿ ಬಾಯಿಯನ್ನು ತೊಳೆಯಬೇಕು. ಸೇವಿಸಿದ ಆಹಾರದ ತುಂಡುಗಳು ಹಲ್ಲಿನ ಮಧ್ಯೆ ಸಿಲುಕಿರುತ್ತದೆ. ಹೀಗಾಗಿ ಹಲ್ಲು ನೋವಾಗುವುದು.

ಬೆಳ್ಳುಳ್ಳಿ: ಅಡುಗೆ ಮನೆಯಲ್ಲಿ ಹೆಚ್ಚು ಬೇಡಿಕೆ ಇರುವ ಬೆಳ್ಳುಳ್ಳಿ ಹಲ್ಲಿನ ನೋವನ್ನು ಕಡಿಮೆಗೊಳಿಸುತ್ತದೆ. ಬೆಳ್ಳುಳ್ಳಿಯನ್ನು ಜಜ್ಜಿ ನೋವಿನ ಜಾಗಕ್ಕೆ ಇಡಿ. ಅಥವಾ ಬೆಳ್ಳುಳ್ಳಿಯನ್ನು ನೋವು ಇರುವ ಹಲ್ಲಿನಲ್ಲಿ ಅಗಿಯಬೇಕು. ಹೀಗೆ ಮಾಡುವುದರಿಂದ ಹಲ್ಲಿನ ನೋವು ಕಡಿಮೆಯಾಗುತ್ತದೆ.
ಅಲೋವೆರಾ: ಲೋಳೆಸರ ಎಲ್ಲರ ಮನೆಯಲ್ಲಿ ಇರುತ್ತೆ. ಔಷಧಿಯ ಗುಣಗಳನ್ನು ಹೊಂದಿರುವ ಲೋಳೆಸರ ಹಲ್ಲಿನ ನೋವು ನಿವಾರಿಸುತ್ತದೆ. ಲೋಳೆಸರ ವಿಟಮಿನ್ ಇ ಹೊಂದಿದ್ದು, ನೋವು ಶಮನಗೊಳಿಸುವ ಶಕ್ತಿ ಹೊಂದಿದೆ. ಲೋಳೆಸರದ ಜೆಲ್ ಅನ್ನು ನೋವಿರುವ ಹಲ್ಲಿಗೆ ಹಾಕಿಕೊಂಡು ಮಸಾಜ್ ಮಾಡಿ.
ಉಪ್ಪಿನ ನೀರು: ಹಲ್ಲುಗಳ ಮಧ್ಯೆ ಸಿಲುಕಿದ ಆಹಾರದ ತುಂಡುಗಳನ್ನು ಉಪ್ಪಿನ ನೀರು ಹೊರಹಾಕುತ್ತದೆ. ಉಪ್ಪು ನೀರಿನಿಂದ ಬಾಯಿಯನ್ನು ಮುಕ್ಕಳಿಸಿದರೆ ಹಲ್ಲು ನೋವು ಕಡಿಮೆಯಾಗುತ್ತದೆ.
ಐಸ್ ಕ್ಯೂಬ್ನ ಹಲ್ಲಿನ ಮೇಲೆ ಇಟ್ಟುಕೊಂಡಾಗ ನೋವು ಕಡಿಮೆಯಾಗುತ್ತದೆ. ಹಲ್ಲು ನೋವಿನಿಂದ ಬಳಲುವವರು ಐಸ್ ಕ್ಯೂಬ್ನ ಬಳಸಬಹುದು. ಅತಿಯಾದ ಕೋಲ್ಡ್ ನೋವನ್ನು ಶಮನಗೊಳಿಸುತ್ತದೆ.
ಈರುಳಿಯನ್ನು ಸಣ್ಣದಾಗಿ ಕತ್ತರಿಸಿ ನೋವಿರುವ ಹಲ್ಲಿನ ಮಧ್ಯ ಇಟ್ಟು ಅಗಿಯಿರಿ. ಅಥವಾ ಈರುಳ್ಳಿ ತುಂಡನ್ನು ನೋವಿರುವ ಹಲ್ಲಿನ ಪಕ್ಕಕ್ಕೆ ಇಡಿ. ಹೀಗೆ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.
ಲವಂಗ ಎಣ್ಣೆ: ಹಲ್ಲಿನ ನೋವಿಗೆ ಲವಂಗ ರಾಮಬಾಣವಿದ್ದಂತೆ. ಲವಂಗ ಎಣ್ಣೆಯನ್ನು ನೋವು ಇರುವ ಹಲ್ಲಿನ ಜಾಗಕ್ಕೆ ಹಚ್ಚಿಕೊಂಡರೆ ನೋವು ನಿವಾರಣೆಯಾಗುವುದು. ಲವಂಗದ ಎಣ್ಣೆಯ ಬದಲಿಗೆ ಲವಂಗವನ್ನು ಜಜ್ಜಿ ಅದರ ಪುಡಿಯನ್ನು ಪೀಡಿತ ಜಾಗಕ್ಕೆ ಹಚ್ಚಬಹುದು.

Discover more from Valmiki Mithra

Subscribe now to keep reading and get access to the full archive.

Continue reading