ಹೂವುಗಳ ರಾಣಿ ಗುಲಾಬಿ ದಳಗಳ ಪ್ರಯೋಜನಗಳು ಗೊತ್ತಾದ್ರೆ ಅಚ್ಚರಿಪಡುವಿರಿ…!

ಗುಲಾಬಿ ಹೂ ಎಂದರೆ ಪ್ರತಿಯೊಬ್ಬರಿಗೂ ಪ್ರಿಯವಾದ ಹೂ. ಇರುವ ಎಲ್ಲಾ ಬಗೆಯ ಹೂಗಳಲ್ಲಿ ಗುಲಾಬಿ ಹೂವಿಗೆ ಮೊದಲ ಸ್ಥಾನ. ಕೇವಲ ಸೌಂದರ್ಯದಲ್ಲಿ ಮಾತ್ರವಲ್ಲದೆ ಆರೋಗ್ಯದ ಪ್ರಯೋಜನಗಳನ್ನು ಒದಗಿಸುವಲ್ಲಿ ಕೂಡ ಗುಲಾಬಿ ಹೂವುಗಳು ತುಂಬಾ ಅತ್ಯದ್ಭುತವಾಗಿ ಕೆಲಸ ಮಾಡುತ್ತವೆ.

ಚರ್ಮದ ಪ್ರಯೋಜನಗಳು ಸೇರಿದಂತೆ ಇನ್ನಿತರ ಆರೋಗ್ಯಕರ ಲಾಭಗಳಿಗೆ ಗುಲಾಬಿ ಹೂಗಳನ್ನು ಯಾವ ರೀತಿ ಬಳಸಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

  • ಗುಲಾಬಿ ಹೂಗಳ ದಳಗಳು ದೇಹದ ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸುವಲ್ಲಿ ಮತ್ತು ದೇಹದಿಂದ ವಿಷಕಾರಿ ಅಂಶಗಳನ್ನು ದೂರ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಮತ್ತು ದೇಹದ ತೂಕ ಕೂಡ ಇದರಿಂದ ನಿರ್ವಹಣೆಯಾಗುತ್ತದೆ. ಹಾಗಾಗಿ ಗುಲಾಬಿ ಹೂವಿನ ದಳಗಳನ್ನು ಸೇವನೆ ಮಾಡಿ ನಿಮ್ಮ ಹೆಚ್ಚಾಗುತ್ತಿರುವ ದೇಹದ ತೂಕಕ್ಕೆ ಕಡಿವಾಣ ಹಾಕಬಹುದು.
  • ಒಂದು ಲೋಟ ಕುದಿಯುವ ನೀರು ತೆಗೆದುಕೊಂಡು ಅದರಲ್ಲಿ ಸುಮಾರು ಹತ್ತರಿಂದ ಹದಿನೈದು ಗುಲಾಬಿ ಹೂವಿನ ದಳಗಳನ್ನು ಹಾಕಿ ನೀರು ನೇರಳೆ ಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಕುದಿಸಬೇಕು. ಬೇಕೆಂದರೆ ಅದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಕುಡಿಯಬಹುದು. ನಿಯಮಿತವಾಗಿ ಇದನ್ನು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಿಮ್ಮ ದೇಹದ ಅತಿಯಾದ ತೂಕ ನಿಯಂತ್ರಣಕ್ಕೆ ಬರಲಿದೆ.

 

  • ಮಾನಸಿಕವಾಗಿ ಯಾರು ಈಗಾಗಲೇ ಸಾಕಷ್ಟು ಆಯಾಸವನ್ನು ಅನುಭವಿಸಿರುತ್ತಾರೆ ಜೊತೆಗೆ ಇನ್ಸೊಮ್ನಿಯ ಸಮಸ್ಯೆ ಮತ್ತು ಮಾನಸಿಕ ಒತ್ತಡ ಇತ್ಯಾದಿಗಳ ಜೊತೆ ಯಾರು ಬದುಕುತ್ತಿರುತ್ತಾರೆ ಅಂತಹವರಿಗೆ ಗುಲಾಬಿ ಹೂವಿನ ದಳಗಳು ಅಚ್ಚುಕಟ್ಟಾಗಿ ಕೆಲಸ ಮಾಡಿ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಗುಲಾಬಿ ಹೂವಿನ ಸಾರ ಅಥವಾ ಪರಿಮಳ ದೇಹ ಸೇರಿದರೆ ಅತ್ಯುತ್ತಮ ಅನುಭವ ಉಂಟಾಗುತ್ತದೆ.

 

  • ಸ್ನಾನಮಾಡುವ ಬಿಸಿನೀರಿನಲ್ಲಿ ಗುಲಾಬಿ ಹೂವಿನ ದಳಗಳನ್ನು ಹಾಕಿ ಸ್ವಲ್ಪ ಹೊತ್ತು ಬಿಟ್ಟರೆ ಗುಲಾಬಿ ಹೂವು ತನ್ನ ಪರಿಮಳವನ್ನು ನೀರಿನ ತುಂಬಾ ಹಬ್ಬುವಂತೆ ಮಾಡುತ್ತದೆ. ಇದು ಇಡೀ ನಿಮ್ಮ ಬಾತ್ರೂಮ್ ತುಂಬಾ ಅತ್ಯದ್ಭುತ ಸುಗಂಧದ್ರವ್ಯದ ರೀತಿ ಕೆಲಸ ಮಾಡುತ್ತದೆ. ಇದರಿಂದ ನಿಮ್ಮ ಮಾನಸಿಕ ಸ್ಥಿತಿಯ ಮೇಲೆ ಸಹಜ ಸಕಾರಾತ್ಮಕ ಪರಿಣಾಮ ಬೀರಲಿದೆ.

 

  • ದೇಹದಲ್ಲಿ ವಿಪರೀತ ಉಷ್ಣದ ಪ್ರಕಾರದಿಂದ ಅಥವಾ ಹೆಚ್ಚು ಹೊತ್ತು ನಿರಂತರವಾಗಿ ಪ್ರತಿ ದಿನ ಕುಳಿತು ಕೆಲಸ ಮಾಡುವವರಿಗೆ ದೇಹದಿಂದ ವಿಷಕಾರಿ ಅಂಶಗಳನ್ನು ದೂರ ಮಾಡುವ ಜೊತೆಗೆ ಮೂಲವ್ಯಾಧಿ ಸಮಸ್ಯೆಗೆ ಪರಿಹಾರ ನೀಡಿ ನೋವು ನಿವಾರಣೆ ಮಾಡುತ್ತದೆ. ಇದಕ್ಕಾಗಿ ನೀವು ಗುಲಾಬಿ ದಳಗಳನ್ನು ನೀರಿನಲ್ಲಿ ಮಿಶ್ರಣ ಮಾಡಿ ಚೆನ್ನಾಗಿ ಪೇಸ್ಟ್ ತಯಾರು ಮಾಡಿಕೊಂಡು ಅದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ನಿರಂತರವಾಗಿ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಮೂರು ದಿನಗಳ ಕಾಲ ಕುಡಿಯುವುದರಿಂದ ಮೂಲವ್ಯಾಧಿ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು.

 

  • ರೋಸ್ ವಾಟರ್ ನಿಮಗೆಲ್ಲ ಗೊತ್ತೇ ಇದೆ. ಗುಲಾಬಿ ಹೂವಿನ ಅತ್ಯದ್ಭುತ ಪ್ರಯೋಜನಗಳು ನಿಮ್ಮ ಚರ್ಮವನ್ನು ಕಿರಿಕಿರಿಯಿಂದ ದೂರ ಮಾಡುವ ಜೊತೆಗೆ ನಿಮ್ಮ ಚರ್ಮದಲ್ಲಿ ಕಂಡುಬರುವ ಅತಿಯಾದ ಎಣ್ಣೆಯ ಅಂಶವನ್ನು ಇಲ್ಲವಾಗಿಸಿ ಚರ್ಮದ ಸಾಂದ್ರತೆಯನ್ನು ಹೆಚ್ಚು ಮಾಡುತ್ತದೆ.

 

  • ಗುಲಾಬಿ ಹೂವಿನ ದಳಗಳಲ್ಲಿ ಕಂಡು ಬರುವ ಆಂಟಿ ಆಕ್ಸಿಡೆಂಟ್ ಅಂಶಗಳು ಚರ್ಮದ ಮೇಲೆ ಕಂಡುಬರುವ ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ತೊಡೆದು ಹಾಕಿ ಚರ್ಮದ ಕಿರಿಕಿರಿ ಮತ್ತು ಕೆರೆತವನ್ನು ದೂರ ಮಾಡುತ್ತವೆ.ನಿಮ್ಮ ತ್ವಚೆಯ ಹೊಳಪು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ರೋಜ್ ವಾಟರ್ ಉಪಯೋಗಿಸಿ. ನಿಯಮಿತವಾಗಿ ಪ್ರತಿ ದಿನ ಇದರ ಬಳಕೆಯಿಂದ ನಿಮ್ಮ ತ್ವಚೆಗೆ ಸಾಕಷ್ಟು ಅನುಕೂಲಗಳು ಲಭ್ಯವಾಗುತ್ತವೆ.

 

  • ನೈಸರ್ಗಿಕವಾದ ರೀತಿಯಲ್ಲಿ ನಿಮ್ಮ ಮುಖದ ಮೇಲಿನ ಮೊಡವೆಗಳಿಗೆ ಪರಿಹಾರ ಸಿಗಬೇಕು ಎಂದರೆ ನೀವು ರೋಸ್ ವಾಟರ್ ಬಳಕೆ ಮಾಡಬಹುದು. ನಿಮ್ಮ ತ್ವಚೆಗೆ ಅನುಕೂಲಕರವಾಗಿ ಇದೊಂದು ಅತ್ಯದ್ಭುತ ಮಾಯಿಶ್ಚರೈಸರ್ ಆಗಿ ಕೆಲಸ ಮಾಡಲಿದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಹೆಚ್ಚಾಗಿರುವ ಕಾರಣ ಮೊಡವೆಗಳ ವಿರುದ್ಧ ಇದು ಕೆಲಸ ಮಾಡಬಲ್ಲದು.

 

  • ಇದಕ್ಕಾಗಿ ನೀವು ರಾತ್ರಿ ಮೆಂತ್ಯ ಕಾಳುಗಳನ್ನು ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಅದನ್ನು ನುಣ್ಣಗೆ ಪೇಸ್ಟ್ ಮಾಡಿಕೊಳ್ಳುವ ಸಂದರ್ಭದಲ್ಲಿ ಗುಲಾಬಿ ಹೂವಿನ ದಳಗಳನ್ನು ಸೇರಿಸಿ ಸುಮಾರು 20 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ನಿಮ್ಮ ಮುಖದ ಮೇಲೆ ಅನ್ವಯಿಸಿ. ತುಂಬಾ ಗಾಢವಾದ ತುಟಿಗಳ ಬಣ್ಣವನ್ನು ಹೊಂದಿರುವವರು ಸುಲಭವಾಗಿ ತುಟಿಗಳ ಬಣ್ಣವನ್ನು ಉತ್ತೇಜಿಸುವ ಗುಲಾಬಿ ಪೇಸ್ಟ್ ಅನ್ವಯಿಸಬಹುದು. ನಿಮ್ಮ ತುಟಿಗಳು ಸುಂದರವಾಗಿ ಕಾಣುವಂತೆ ಗುಲಾಬಿ ಹೂ ಮಾಡುತ್ತದೆ.

 

  • ಇದಕ್ಕಾಗಿ ನೀವು ಗುಲಾಬಿ ಹೂವಿನ ದಳಗಳನ್ನು ಹಾಲಿನ ಕೆನೆಯೊಂದಿಗೆ ಮಿಶ್ರಣಮಾಡಿ ಪೇಸ್ಟ್ ತಯಾರಿಸಿಕೊಂಡು ಅದಕ್ಕೆ ಸ್ವಲ್ಪ ಹನಿಗಳಷ್ಟು ಜೇನುತುಪ್ಪವನ್ನು ಬೆರೆಸಿ ತುಟಿಗಳಮೇಲೆ ಹಚ್ಚಿ ಸುಮಾರು 20 ನಿಮಿಷಗಳ ಕಾಲ ಹಾಗೆ ಇರಲು ಬಿಡಿ.

Discover more from Valmiki Mithra

Subscribe now to keep reading and get access to the full archive.

Continue reading