ಮಧುಗಿರಿ: ಪಟ್ಟಣದ ಎಂ.ಎನ್.ಕೆ.ಸಮುದಾಯ ಭವನದಲ್ಲಿ ಪ್ರೋ ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಧುಗಿರಿ ಶಾಖೆ ಇವರ ವತಿಯಿಂದ ಆಯೋಜಿಸಿದ್ದ ಭೀಮನ ಕವನಸಂಕಲನ ಲೋಕಾರ್ಪಣೆಯ ಕಾರ್ಯಕ್ರಮವನ್ನು ಮಾನ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮಧುಗಿರಿ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರು ಆದ ಕೆ.ಎನ್.ರಾಜಣ್ಣನವರು ಉಧ್ಘಾಟಿಸಿ ಬಿಡುಗಡೆ ಮಾಡಿದರು.
ಇದೇ ಸಂಧರ್ಭದಲ್ಲಿ ಇತ್ತಿಚೆಗೆ ತಾಲ್ಲೂಕು ಸಾಹಿತ್ಯ ಪರಿಷತ್ ಗೆ ಅಧ್ಯಕ್ಷೆರಾಗಿ ಆಯ್ಕೆಯಾದ ಸಹನ ನಾಗೇಶ್ ಹಾಗು ಮತ್ತಿತರ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಾಹಿತಿ ಮಲನ ಮೂರ್ತಿ,ಪುರಸಭಾಧ್ಯಕ್ಷ ತಿಮ್ಮರಾಯಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ರಾಜ್ಯ ಸಂಚಾಲಕ ಎಂ.ಸೋಮಶೇಖರ್, ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಎಸ್.ಆರ್.ರಾಜಗೋಪಾಲ್, ಮುಖಂಡರಾದ ಗೋಪಾಲಯ್ಯ, ಎನ್.ಗಂಗಣ್ಣ, ಮಾಜಿ ಪುರಸಭಾಧ್ಯಕ್ಷ ಎಂ.ಕೆ.ನಂಜುಂಡಯ್ಯ, ಸಿದ್ದಗಂಗಪ್ಪ, ಸಿದ್ದಾಪುರ ವೀರಣ್ಣ, ಯೋಗಾನಂದ, ಸಿದ್ದಾಪುರ ರಂಗಶ್ಯಾಮಣ್ಣ, ತಾಲ್ಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ರಂಗಪ್ಪ, ಡಿ.ಟಿ.ಸಂಜೀವ ಮೂರ್ತಿ, ಕಾಕಪ್ಪ, ಚಿನ್ನಪ್ಪಯ್ಯ, ಪೋಸ್ಟ್ ಮರಿಯಪ್ಪ, ಎಸ್.ಕೆ.ರಂಗನಾಥ್, ಚಿಕ್ಕಮ್ಮ, ಅರಳಾಪುರ ರಾಮಚಂದ್ರಪ್ಪ, ಸೋಂಪುರ ರಂಗನಾಥ್ , ಜೀವಿಕ ಮಂಜು, ಚಿಕ್ಕಮ್ಮ, ಯಲ್ಕೂರು ಲಕ್ಷ್ಮೀಪತಿ, ಎಸ್.ಸಂಜೀವಯ್ಯ ಮತ್ತಿತರರು ಇದ್ದರು.