ಯಾದಗಿರಿ: ಜಿಲ್ಲೆಯ ಶಹಪುರ್ ತಾಲೂಕಿನ ಐಕುರ್ ಗ್ರಾಮದಿಂದ ಪುನೀತ್ ರಾಜಕುಮಾರ್ ಸಮಾಧಿ ನೋಡಲು ಅಂಗವಿಕಲನಾದ ರವಿಕುಮಾರ್ ಹೊರಟಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ನಾನು ಅಪ್ಪಟ ನಟ ಪುನೀತ್ ರಾಜಕುಮಾರ್ ಅಭಿಮಾನಿಯಾಗಿದ್ದು ಜೀವಂತವಾಗಿದ್ದಾಗ ನೋಡೋದಕ್ಕೆ ಆಗಿಲ್ಲ ಅವರ ಸಮಾಧಿ ನೋಡಾಕೆ ಪಾದಯಾತ್ರೆ ಹೊರಟಿದ್ದೇನೆ ಇವತ್ತಿನಿಂದ ಪಾದಯಾತ್ರೆ ಪ್ರಾರಂಭ ಮಾಡಿದ್ದೇನೆ ಎಂದರು.
ಪುನೀತ್ ರಾಜ್ಕುಮಾರ್ ಅವರು ನಿಧನರಾದ ಬಳಿಕ ಅವರ ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ಅಪ್ಪು ಇಲ್ಲ ಎಂಬ ಕಹಿ ಸತ್ಯವನ್ನು ಯಾರಿಂದಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುನೀತ್ ರಾಜ್ಕುಮಾರ್ ಸಮಾಧಿ ಬಳಿ ಪ್ರತಿ ದಿನ ಸಾವಿರಾರು ಅಭಿಮಾನಿಗಳು ಬಂದು ನಮನ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬರ ಅಭಿಮಾನ ಕೂಡ ಭಿನ್ನವಾಗಿದೆ.