ಬೆಂಗಳೂರು: ನಟ ಡಾಲಿ ಧನಂಜಯ್ ಅಭಿನಯದ ‘ರತ್ನನ್ ಪ್ರಪಂಚ’ ಚಿತ್ರದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ್ದ ನಟಿ ರೆಬಾ ಮೊನಿಕಾ ಜಾನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಕುಟುಂಬ, ಸ್ನೇಹಿತರು ಹಾಗೂ ಬಂಧುಬಳಗದವರ ಸಮ್ಮುಖದಲ್ಲಿ ಬೆಂಗಳೂರಿನ ಚರ್ಚ್ ಒಂದರಲ್ಲಿ ಸರಳವಾಗಿ ನೆರವೇರಿದೆ. ತಮ್ಮ ಬಾಯ್ಫ್ರೆಂಡ್ ಜೊಮನ್ ಜೋಸೆಫ್ ಜತೆ ಹೊಸ ಬಾಳ ಪಯಣವನ್ನು ರೆಬಾ ಆರಂಭಿಸಿದ್ದಾರೆ.ಸುಮಾರು ಒಂದು ವರ್ಷಗಳ ಕಾಲ ಡೇಟಿಂಗ್-ಮೀಟಿಂಗ್ ನಡೆಸಿದ್ದ ಜೋಡಿ, ಇದೀಗ ವೈವಾಹಿಕ ಬಂಧನದ ಮೂಲಕ ಜೀವನದ ಹೊಸ ಇನ್ನಿಂಗ್ಸ್ ಒಟ್ಟಿಗೆ ಪ್ರಾರಂಭಿಸಿದ್ದಾರೆ.