ರಾಯಚೂರು: ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಹಾಗೂ ಶಿಲ್ಪಾ ಫೌಂಡೇಶನ್ ಅವರು ದೇವದುರ್ಗ ತಾಲೂಕು ಆಸ್ಪತ್ರೆಯಲ್ಲಿ ನಿರ್ಮಿಸಿರುವ ಮಕ್ಕಳ ತೀವ್ರ ನಿಗಾ ಘಟಕ(PICU) ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ಶಿವನಗೌಡ ನಾಯಕ ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಹಾಗೂ ಶಿಲ್ಪಾ ಫೌಂಡೇಶನ್ ಎಂಡಿ ವಿಷ್ಣುಕಾಂತ್ ಭುತಾಡ್, ಡಿಎಚ್ಒ ಡಾ.ಕೆ.ರಾಮಕೃಷ್ಣ, ಬಿಜೆಪಿ ಮಂಡಲ ಅಧ್ಯಕ್ಷ ಜಂಬಣ್ಣ ನಿಲೋಗಲ್, ಟಿಎಚ್ಒ ಡಾ.ಬನದೇಶ್ವರ ಗಬ್ಬೂರು, ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಎಸ್.ಹುಲಮನಿ ಗೌಡ್ರು, ಐಎಂಎ ರಾಜ್ಯ ಸಮಿತಿ ಸದಸ್ಯ ಡಾ.ಎಚ್.ಎ.ನಾಡಗೌಡ, ನಗರ ಘಟಕ ಬಿಜೆಪಿ ಅಧ್ಯಕ್ಷ ಜಹೀರ್ ಪಾಷಾ ಇಡಪನೂರು, ಮುಖಂಡರಾದ ಬಸವರಾಜ ವಕೀಲರು ಗಾಣಧಾಳ, ದೇವಿಂದ್ರಪ್ಪ ಸಾಸ್ವಿಗೇರಾ, ನೂತನ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಯಲ್ಲಪ್ಪ ಬೊಮ್ಮನಾಳ, ದೀಪಾ ಬಸವರಾಜ, ನಿಜಗುಣಯ್ಯ ಸ್ವಾಮಿ, ಸತೀಶ ಜಾಜಿ, ಶರಣಪ್ಪ ಸಾಹು, ರಾಮಕೃಷ್ಣ, ಶರಣಗೌಡ ಗುಂಟ್ರಾಳ, ಯಲ್ಲಪ್ಪ ಹಿರೇಬೂದುರು ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.